ಕೆಣಕ್ತಾರೆ, ಸಾಯ್ತಾರೆ: ಬಿಳಿ ಧ್ವಜ ತಂದು ಹೆಣ ತೊಗೊಂಡ್ತಾರೆ!

Published : Sep 14, 2019, 02:50 PM ISTUpdated : Sep 14, 2019, 07:23 PM IST
ಕೆಣಕ್ತಾರೆ, ಸಾಯ್ತಾರೆ: ಬಿಳಿ ಧ್ವಜ ತಂದು ಹೆಣ ತೊಗೊಂಡ್ತಾರೆ!

ಸಾರಾಂಶ

ಸಹೋದ್ಯೋಗಿ ಹೆಣ ಕೊಂಡೊಯ್ಯಲು ಬಿಳಿ ಧ್ವಜ ಪ್ರದರ್ಶಿಸಿದ ಪಾಕ್ ಸೇನೆ| POK ಬಳಿಯ ಹಾಜಿಪುರ್ ಸೆಕ್ಟರ್ ಬಳಿ ಪಾಕ್ ಸೈನಿಕರಿಂದ ಬಿಳಿ ಧ್ವಜ ಪ್ರದರ್ಶನ| ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲು ಯತ್ನಿಸಿ ಹೆಣವಾದ ಪಾಕ್ ಸೈನಿಕ ಗುಲಾಂ ರಸೂಲ್| ರಸೂಲ್ ಮೃತದೇಹ ಪಡೆಯಲು ಬಿಳಿ ಧ್ವಜದೊಂದಿಗೆ ಬಂದ ಪಾಕ್ ಸೈನಿಕರು|

ಶ್ರೀನಗರ(ಸೆ.14): ಗಡಿಯಲ್ಲಿ ಪದೇ ಪದೇ ಭಾರತೀಯ ಸೈನಿಕರನ್ನು ಕೆಣಕುವ ದುಸ್ಸಾಹಸ ಮಾಡುವ ಪಾಕ್ ಸೈನಿಕರು, ಕೊನೆಗೆ ಸೇರುವುದು ಯಮನ ಪಾದವನ್ನೇ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲೆತ್ನಿಸಿದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಸದೆ ಬಡೆದಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಬಳಿ ಇರುವ ಹಾಜಿಪುರ್ ಸೆಕ್ಟರ್ ಬಳಿ, ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲೆತ್ನಿಸಿದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಭಾರತೀಯ ಸೈನಿಕರ ಆರ್ಭಟಕ್ಕೆ ಬಿಲ ಸೇರಿದ ಪಾಕ್ ಸೈನಿಕರು, ದಾಳಿಯಲ್ಲಿ ಸತ್ತ ತಮ್ಮ ಸಹೋದ್ಯೋಗಿಗಳ ಶವ ಕೊಂಡೊಯ್ಯಲು ಬಿಳಿ ಧ್ವಜ ತೋರಿಸಿದ ಘಟನೆ ನಡೆದಿದೆ.

ದಾಳಿಯಲ್ಲಿ ಹತನಾದ ಪಾಕ್ ಸೈನಿಕ ಗುಲಾಂ ರಸೂಲ್ ಅವರ ಪಾರ್ಥೀವ ಶರೀರವನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನಾಧಿಕಾರಿಗಳು ಬಿಳಿ ಧ್ವಜ ಪ್ರದರ್ಶಿಸಿ, ಶವ ಕೊಂಡೊಯ್ಯುವವರೆಗೂ ದಾಳಿ ಮಾಡದಂತೆ ಭಾರತೀಯ ಸೈನಿಕರಲ್ಲಿ ಮನವಿ ಮಾಡಿದ್ದಾರೆ. 

ಕಳೆದ ಜುಲೈ 30-31ರಂದು ಕೆರಾನ್ ಸೆಕ್ಟರ್'ನಲ್ಲಿ ನಡೆದ ಕದನ ವಿರಾಮ ಉಲ್ಲಂಘನೆ ವೇಳೆ, ಪಾಕಿಸ್ತಾನದ ಏಳು ಸೈನಿಕರನ್ನು ಭಾರತೀಯ ಸೇನೆ ಹತ್ಯೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್