ಮೋದಿ ಸ್ಕೀಂ ಹೆಸರಿನಲ್ಲಿ ವೃದ್ಧ ದಂಪತಿಗಳಿಗೆ ವಂಚನೆ

By Web DeskFirst Published Aug 1, 2018, 11:51 AM IST
Highlights

ಜನ ಸಾಮಾನ್ಯರ ಅನುಕೂಲಕ್ಕಾಗಿ ಪ್ರಧಾನಿ ಮೋದಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೋದಿ ಯೋಜನೆ ಅನುಕೂಲವಾಗುವ ಬದಲು ವೃದ್ಧ ದಂಪತಿಗಳಿಗೆ ವಂಚನೆಯಾಗಿ ಮಾರ್ಪಟ್ಟಿದೆ. 

ಬೆಂಗಳೂರು (ಆ. 01): ಪ್ರಧಾನಿ ಮೋದಿ ಹೆಸರಿನ ಸ್ಕೀಂ ಹೆಸರಿನಲ್ಲಿ ವೃದ್ಧ ದಂಪತಿಗಳಿಗೆ ವಂಚನೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 

60 ವರ್ಷ ಮೇಲ್ಪಟ್ಟ ವಯೋವೃದ್ದರನ್ನ ಟಾರ್ಗೆಟ್ ಮಾಡಿದೆ ವಂಚಕ‌ ಗ್ಯಾಂಗ್.  ಮೋದಿ ಸ್ಕೀಮ್ ಹೆಸರಲ್ಲಿ ಮನೆಗೆ ಬಂದ ನಕಲಿ ಇಂಜನಿಯರ್’ಗಳು ಹಿರಿಯ ನಾಗರೀಕರಿಗೆ ಮೋದಿ ಸರ್ಕಾರ ಲೈಟನ್ನು ಉಚಿತವಾಗಿ ವಿತರಿಸುವ ಆಫರ್ ನೀಡಿದ್ದಾರೆ. 

ಬಲ್ಬ್ ಕೊಟ್ಟು ಹಣ ಕೊಡಿ ಸ್ಕ್ಯಾನ್ ಮಾಡಿ ಕೊಡುತ್ತೇವೆ. 10 ಸಾವಿರ ಕೊಡಿ ಮತ್ತೆ ವಾಪಸ್ ಕೊಡುತ್ತೇವೆ ಅಂತ ಅಸಾಮಿಗಳು ನಂಬಿಸಿದ್ದಾರೆ.  ಬಳಿಕ ಆಧಾರ್ ಕಾರ್ಡ್ ತನ್ನಿ ಎಂದಿದ್ದಾರೆ. ತರಲು ಒಳಗೆ ಹೋದಾಗ ಖದೀಮರು ಎಸ್ಕೇಪ್ ಆಗಿದ್ದಾರೆ. 

ಆಗಂತುಕರು ಓಡಿ ಹೋಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಬೆಂಗಳೂರಿನ ವಿಜಯನಗರದ ಹೊಸಹಳ್ಳಿಯಲ್ಲಿ  ಈ ಘಟನೆ ನಡೆದಿದೆ.  ವಿಜಯನಗರ ನಿವಾಸಿ ನಾಗೇಶ್ವರರಾವ್ ದಂಪತಿಗೆ ಮೋದಿ ಹೆಸರಲ್ಲಿ ಮೋಸ ಮಾಡಿದ್ದಾರೆ.  ಬಲ್ಬ್ ಕೂಟ್ಟು 9600 ರೂ ಹಣವನ್ನು ಕಿತ್ತುಕೊಂಡು ಓಡಿ ಹೋಗಿದ್ದಾರೆ ಅಸಾಮಿಗಳು.  ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

click me!