ಲೋಕಸಭಾ ಚುನಾವಣೆಗೆ ಮೈತ್ರಿ ಫೈನಲ್

By Web DeskFirst Published Aug 1, 2018, 11:44 AM IST
Highlights

ಲೋಕಸಭಾ ಚುನಾವಣೆಗೆ ಈಗಾಗಲೇ ಅನೇಕ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿವೆ. ಅಲ್ಲದೇ ಬಿಜೆಪಿಯನ್ನು ಹಣಿಯಲು ಇದೀಗ ಮೈತ್ರಿ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಆರ್‌ಎಲ್‌ಡಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ. 

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು (80) ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಬಗ್ಗುಬಡಿಯುವ ಉದ್ದೇಶದೊಂದಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಆರ್‌ಎಲ್‌ಡಿಗಳು ಸ್ಥಾನ ಹೊಂದಾಣಿಕೆ ನಿಟ್ಟಿನಲ್ಲಿ ಒಪ್ಪಂದಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ. 

ಆಗ ಆಗಿರುವ ಆರಂಭಿಕ ಮಾತುಕತೆಯ ಪ್ರಕಾರ, ಕಾಂಗ್ರೆಸ್ಸಿಗೆ 8 ಸೀಟುಗಳನ್ನು ನೀಡುವ ಚಿಂತನೆ ಇದೆ. ಕಾಂಗ್ರೆಸ್ ಪಟ್ಟು ಹಿಡಿದರೆ 2 ಸ್ಥಾನ ಹೆಚ್ಚು ಸಿಗಬಹುದು. ಆದರೆ 10 ಕ್ಕಿಂತ ಹೆಚ್ಚು ಸೀಟು ಲಭಿಸುವ ಸಾಧ್ಯತೆ ಇಲ್ಲ. 

ಮಿತ್ರಕೂಟದ ಪೈಕಿ ಬಿಎಸ್ಪಿ 40 ಸ್ಥಾನಗಳಲ್ಲಿ ಸ್ಪರ್ಧಿಸುವ ಸಂಭವವಿದೆ. 32  ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅದರಲ್ಲೇ ಮೂರು ಸ್ಥಾನವನ್ನು ಆರ್‌ಎಲ್‌ಡಿಗೆ ಬಿಟ್ಟುಕೊಡಬೇಕಾಗುತ್ತದೆ ಎನ್ನಲಾಗಿದೆ. 

click me!