ವೈದ್ಯ ಲೋಕದ ಚಮತ್ಕಾರ: ‘ಪಿಪಿ’ಬ್ಲಡ್ ಆವಿಷ್ಕಾರ!

By Web DeskFirst Published Aug 1, 2018, 11:41 AM IST
Highlights

ವಿರಳಾತಿ ವೀರಳ ಪಿಪಿ ರಕ್ತದ ಗುಂಪು ಪತ್ತೆ

ಪಿ ನಲ್ ಮಾದರಿ ಪತ್ತೆ ಹಚ್ಚಿದ ಮಣಿಪಾಲ್ ಆಸ್ಪತ್ರೆ

5.8 ಮಿಲಿಯನ್ ಜನರಲ್ಲಿ ಒಬ್ಬನಲ್ಲಿ ಪಿಪಿ ರಕ್ತ

ಬೆಂಗಳೂರಿನ ವ್ಯಕ್ತಿಯಲ್ಲಿ ಪಿಪಿ ರಕ್ತದ ಗುಂಪು 
 

ಬೆಂಗಳೂರು(ಆ.1): ವಿರಳಾತಿ ವಿರಳ ಮತ್ತು ದೇಶದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿರುವ 'ಪಿಪಿ' ಅಥವಾ ಪಿ ನಲ್ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದಾರೆ. 

ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ ಪಿಪಿ ರಕ್ತದ ಗುಂಪಿಗೆ ಸೇರಿದ್ದು, ವಿರಳವಾಗಿರುವ ಈ ಮಾದರಿಯ ರಕ್ತ ಬ್ಲಡ್ ಬ್ಯಾಂಕ್ ನಲ್ಲಿ ಇರಲಿಲ್ಲ. ದೇಶದ ಸುಮಾರು 80 ಘಟಕಗಳಲ್ಲಿ ತಪಾಸಣೆ ನಡೆಸಿದರೂ ನಿರ್ದಿಷ್ಟ ರಕ್ತದ ಮಾದರಿ ಯಾವ ರಕ್ತದೊಂದಿಗೂ ಹೊಂದಾಣಿಯಾಗದ ಕಾರಣಕ್ಕೆ ರೋಗಿಗೆ ರಕ್ತರಹಿತ ಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. 

ಎ, ಬಿ, ಒ ಹಾಗೂ ಹೆಚ್ಆರ್ ಡಿ ರಕ್ತದ ಗುಂಪುಗಳಲ್ಲಿ ಸಾಮಾನ್ಯವಾಗಿರುವ ವರ್ಗೀಕರಣಗಳು. ಆದರೆ, ಸುಮಾರು 200ಕ್ಕೂ ಅಧಿಕ ಸಣ್ಣ ಸಣ್ಣ ರಕ್ತ ಗುಂಪುಗಳ ಪ್ರತಿಜನಕಗಳನ್ನು ಈಗಾಗಲೇ ಗುರುತಿಸಲಾಗಿದೆ. 1 ಸಾವಿರಕ್ಕಿಂತಲೂ ಕಡಿಮೆ ಜನರಲ್ಲಿ ಗುರುತಿಸಲಾಗುವ ವಿಶೇಷ ರಕ್ತದ ಗುಂಪನ್ನು ಅಪರೂಪದ ರಕ್ತ ಎಂದು ಕರೆಯಲಾಗುತ್ತದೆ. 

ಪಿಪಿ ರಕ್ತದ ಮಾದರಿ ಪತ್ತೆಯಾಗುತ್ತಿರುವುದು ಇದೇ ಮೊದಲು. ವ್ಯಕ್ತಿಯ ರಕ್ತದ ಗುಂಪು ಜನಾಂಗೀಯತೆ ಹಾಗೂ ಅನುವಂಶಿಕ ಸ್ವಭಾವಗಳನ್ನು ಆಧರಿಸುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗಳೂ ಇರುತ್ತವೆ. 5.8 ಮಿಲಿಯನ್ ಜನರಲ್ಲಿ ಕೇವಲ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಪಿಪಿ ರಕ್ತದ ಮಾದರಿ ಕಂಡು ಬರುತ್ತದೆ.

click me!