ದೆವ್ವ ಇರುವಿಕೆ ತೋರಿಸಿದ್ರೆ 50 ಸಾವಿರ ರೂ. ಬಹುಮಾನ!

By Web DeskFirst Published Oct 26, 2019, 11:37 AM IST
Highlights

ಮೂಢನಂಬಿಕೆ, ವಾಮಾಚಾರ ತೊಡೆದುಹಾಕಲು ಓಡಿಶಾದ ಗಂಜಾಮ್‌ ಜಿಲ್ಲಾಡಳಿತ ಜನರಿಗೆ ವಿಶೇಷ ಸವಾಲು| ದೆವ್ವ ಇರುವಿಕೆ ತೋರಿಸಿದ್ರೆ 50 ಸಾವಿರ ಬಹುಮಾನ!| 

ಬೆರ್ಹಾಂಪುರ[ಅ.26]: ದೆವ್ವಗಳ ಬಗ್ಗೆ ಜನರಲ್ಲಿನ ಮೂಢನಂಬಿಕೆ, ವಾಮಾಚಾರ ತೊಡೆದುಹಾಕಲು ಓಡಿಶಾದ ಗಂಜಾಮ್‌ ಜಿಲ್ಲಾಡಳಿತ ಜನರಿಗೆ ವಿಶೇಷ ಸವಾಲೊಂದನ್ನು ನೀಡಿದೆ. ಭೂತ, ದೆವ್ವಗಳ ಅಸ್ತಿತ್ವವನ್ನು ಯಾರು ಸಾಬೀತುಪಡಿಸುತ್ತಾರೋ ಅವರಿಗೆ 50 ಸಾವಿರ ರು. ಬಹುಮಾನ ನೀಡಲಾಗುತ್ತದೆ ಎಂದು ಘೋಷಿಸಿದೆ.

ಅನಾರೋಗ್ಯ ಕಾಣಿಸಿಕೊಂಡಾಗ ಮಂತ್ರವಾದಿ ಬಳಿಗೆ ಹೋಗುವ ಬದಲು ಆಸ್ಪತ್ರೆಗೆ ದಾಖಲಾಗಬೇಕು. ದೆವ್ವ, ಮಾಟ ಮಂತ್ರ ಎಲ್ಲವೂ ಮೂಢನಂಬಿಕೆ. ವಾಮಾಚಾರದಿಂದ ಇತರರಿಗೆ ಕೆಡಕು ಆಗುತ್ತದೆ ಎಂಬುದು ಶುದ್ಧಸುಳ್ಳು ಎಂದು ಜಿಲ್ಲಾಧಿಕಾರಿ ವಿಜಯ್‌ ಅಮೃತಾ ಕುಲಂಗೆ ಹೇಳಿದ್ದಾರೆ.

ಈಚೆಗೆ ವಾಮಾಚಾರ ನೆಪದಲ್ಲಿ 6 ಜನರ ಹಲ್ಲುಕೀಳಿಸಿ, ಮಲಮೂತ್ರ ಕುಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 45 ಜನರನ್ನು ಬಂಧಿಸಲಾಗಿದೆ.

click me!