ಸೌದಿ ವಿರುದ್ಧ ದಾವೆ ಹೂಡಬೇಕೆನ್ನುವ ಮಸೂದೆಗೆ ಒಬಾಮ ನಕಾರ

By Internet DeskFirst Published Sep 24, 2016, 10:50 AM IST
Highlights

ವಾಷಿಂಗ್'ಟನ್ (ಸೆ.24): 9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ಥ ಕುಟುಂಬಗಳು ಸೌದಿ ಅರೇಬಿಯಾ ಮೇಲೆ ದಾವೆ ಹೂಡಬೇಕು ಎನ್ನುವ ಮಸೂದೆಗೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ನಿರಾಕರಿಸಿದ್ದಾರೆ.

ಒಬಾಮಾರವರ ಈ ನಿರಾಕರಣೆಯನ್ನು ಸಂಸತ್ ಸದಸ್ಯರು ಅನೂರ್ಜಿತಗೊಳಿಸುವ ಯೋಜನೆಯನ್ನು ಇಟ್ಟುಕೊಂಡಿದ್ದಾರೆ. ಒಂದು ವೇಳೆ ಅನೂರ್ಜಿತಗೊಳಿಸಿದರೆ ಇದೇ ಮೊದಲ ಬಾರಿಗೆ ಒಬಾಮಾ ಅಧ್ಯಕ್ಷೀಯ ಅವಧಿಯಲ್ಲಿ ವಿಟೋ ವನ್ನು ಅನೂರ್ಜಿತಗೊಳಿಸಿದಂತಾಗುತ್ತದೆ.

Latest Videos

9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರು ಇನ್ನೂ ನೋವನ್ನು ಅನುಭವಿಸುತ್ತಿದ್ದಾರೆ. ಅವರ ನೋವನ್ನು ಅಳಿಸಿಹಾಕಲಾಗುವುದಿಲ್ಲ. ನಮ್ಮ ಆಡಳಿತವು ಅವರಿಗೆ ನ್ಯಾಯ ಒದಗಿಸುವಲ್ಲಿ ಹಾಗೂ ಇನ್ನೊಂದು ದಾಳಿ ಆಗದಂತೆ ತಡೆಗಟ್ಟಲು ಬದ್ಧವಾಗಿದೆ ಎಂದು ಒಬಾಮಾ ಸಂಸತ್ ಗೆ ಪತ್ರ ಬರೆದಿದ್ದಾರೆ.

 

click me!