ಉರಿ ದಾಳಿ ಬಗ್ಗೆ ಮೊದಲೇ ಪೊಲೀಸರಿಗೆ ತಿಳಿಸಿದ್ದೆ: ಆರ್ಟಿಐ ಕಾರ್ಯಕರ್ತ ಬಿಚ್ಚಿಟ್ಟ ಬೆಚ್ಚಿ ಬೀಳಿಸುವ ಸತ್ಯ

By internet deskFirst Published Sep 24, 2016, 9:36 AM IST
Highlights

ಸೆಪ್ಟೆಂಬರ್ 5ರಂದೇ ಓಮನ್ನಿನ ಮಹಿಳೆಯೊಬ್ಬರು ದಾಳಿ ಬಗ್ಗೆ ನನಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದರು.

ಶ್ರೀನಗರ(ಸೆ.24): ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ 18 ಯೋಧರು ವೀರಮರಣವನ್ನಪ್ಪಿದರು. ವಿಶ್ವಾದ್ಯಂತ ದಾಳಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಇಂತಹ ಭೀಕರ ದಾಳಿ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ಸಿಕ್ಕಿರಲಿಲ್ಲವಾ ಎಂಬ ಪ್ರಶ್ನೆಗಳು ಕಾಡುತ್ತಿರುವ ಬೆನ್ನಲ್ಲೇ ಆರ್`ಟಿಐ ಕಾರ್ಯಕರ್ತನೊಬ್ಬ ಉರಿ ದಾಳಿ ಬಗ್ಗೆ ಮೊದಲೇ ಪೊಲೀಸರು ಮತ್ತು ಎಸ್`ಟಿಎಫ್`ಗೆ ತಿಳಿಸಿದ್ದೇ ಎಂದು ಹೇಳಿಕೊಂಡಿದ್ದಾನೆ.

ಡ್ಯಾನಿಶ್ ಖಾನ್ ಎಂಬ ಆರ್`ಟಿಐ ಕಾರ್ಯಕರ್ತ ಸಿಎನ್`ಎನ್ ಐಬಿಎನ್ ಜೊತೆ ಈ ಮಾಹಿತಿ ಹಂಚಿಕೊಂಡಿದ್ಧಾನೆ. ಸೆಪ್ಟೆಂಬರ್ 5ರಂದೇ ಓಮನ್ನಿನ ಮಹಿಳೆಯೊಬ್ಬರು ದಾಳಿ ಬಗ್ಗೆ ನನಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಿದ್ದರು.ಬಳಿಕ ನಾನು ರಾಂಪುರ ಪೊಲೀಸರು ಮತ್ತು ಎಸ್`ಟಿಎಫ್`ಗೆ ತಿಳಿಸಿದ್ದೆ ಎಂದು ಹೇಳಿದ್ದಾನೆ.

Latest Videos

 

 

     

click me!