ಟ್ರಂಪ್ ಆಗವ್ರೆ ಅಂದ್ರೆ ಬಾಬಾನೂ ಆಗ್ತವ್ರೆ: ನ್ಯೂಯಾರ್ಕ್ ಟೈಮ್ಸ್!

By Web DeskFirst Published Jul 29, 2018, 5:33 PM IST
Highlights

ಬಾಬಾ ರಾಮದೇವ್ ಭಾರತದ ಭವಿಷ್ಯದ ಪ್ರಧಾನಿ

ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವ್ಯಂಗ್ಯ

ಟ್ರಂಪ್ ಆದಂತೆ ಬಾಬಾ ಕೂಡ ಭಾರತ ಆಳ್ತಾರೆ

ಇಬ್ಬರ ವ್ಯವಹಾರ ಸಾಮ್ರಾಜ್ಯ ವಿಸ್ತರಣೆ ಪ್ರಸ್ತಾಪ

ನ್ಯೂಯಾರ್ಕ್(ಜು.29): ಡೋನಾಲ್ಡ್ ಟ್ರಂಪ್ ಅವರಂತವರೇ ಅಮೆರಿಕದ ಅಧ್ಯಕ್ಷರಾಗಿರುವಾಗ ಬಾಬಾ ರಾಮದೇವ್ ಕೂಡ ಭವಿಷ್ಯದಲ್ಲಿ ಭಾರತದ ಪ್ರಧಾನಿಯಾದರೆ ಅಚ್ಚರಿಯಿಲ್ಲ ಎಂದು ಅಮೆರಿಕದ ಪ್ರತಿಷ್ಟಿತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವ್ಯಂಗ್ಯವಾಡಿದೆ.

ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಯೋಗಗುರು ಬಾಬಾ ರಾಮದೇವ್ ಅವರನ್ನು ಭಾರತದ ಭವಿಷ್ಯದ ಪ್ರಧಾನಿ ಎಂದು ನುಡಿಚಿತ್ರವೊಂದರಲ್ಲಿ ತೋರಿಸಲಾಗಿದೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಾಬಾ ರಾಮದೇವ್ ಅವರನ್ನು ಹೋಲಿಕೆ ಮಾಡಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕಾದ ಪ್ರಧಾನಿಯಾದಂತೆ ಭಾರತದ ಭವಿಷ್ಯದ ಪ್ರಧಾನಿಯಾಗುವ ಎಲ್ಲಾ ಅರ್ಹತೆಯೂ ಬಾಬಾ ರಾಮದೇವ್ ಗೆ ಇದೆ ಎಂದು ವ್ಯಂಗ್ಯ ಮಾಡಲಾಗಿದೆ.

ಅಮೆರಿಕದಾದ್ಯಂತ ಡೊನಾಲ್ಡ್ ಟ್ರಂಪ್ ತಮ್ಮ ವ್ಯವಹಾರ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿದ್ದಾರೋ, ಅದೇ ರೀತಿಯಲ್ಲಿ ಬಾಬಾ ರಾಮದೇವ್ ಕೂಡಾ ಭಾರತದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದಾರೆ. ತಮ್ಮ ಪತಂಜಲಿ ಕಂಪನಿಯನ್ನು ಭಾರತದ ಮೂಲೆಗಳಿಗೂ ತಲುಪಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 

ಪ್ರಧಾನಿ ನರೇಂದ್ರ ಮೋದಿಯ ಯಶಸ್ಸಿನ ಹಿಂದೆಯೂ ಬಾಬಾ ರಾಮದೇವ್ ಇದ್ದಾರೆ. ಯೋಗಗರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಮದೇವ್ ಅವರ ಸಾಮ್ರಾಜ್ಯವನ್ನು ಸಂಪೂರ್ಣ ವಿಸ್ತರಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪರೋಕ್ಷವಾಗಿ ಉಲ್ಲೇಖಿಸಿದೆ.

click me!