
ನವದೆಹಲಿ[ಜು.29] ಕೇಂದ್ರ ಸರಕಾರ ನೌಕರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಸರಕಾರಿ ನೌಕರರು ಇನ್ನು ಮುಂದೆ ವಿದೇಶ ಪ್ರವಾಸ ಮಾಡಬಹುದು. ಹೌದು ಇಂಥದ್ದೊಂದು ಶುಭ ಸುದ್ದಿಯನ್ನು ಹಿರಿಯ ಅಧಿಕಾರಿಗಳು ಕನ್ಫರ್ಮ್ ಮಾಡಿದ್ದಾರೆ.
ಇಂಥದ್ದೊಂದು ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದ್ದು ಗೃಹ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಮತ್ತು ವೆಚ್ಚ ನಿರ್ವಹಣಾ ಇಲಾಖೆಗೆ ವರದಿ ಸಲ್ಲಿಸಲು ಕೋರಲಾಗಿದೆ.
ವಿದೇಶಾಂಗ ಇಲಾಖೆ ಹೊಸ ಆಲೋಚನೆಯನ್ನು ಮುಂದೆ ಇಟ್ಟಿದ್ದು , ಕಜಕಿಸ್ತಾನ, ಉಜಬೇಕಿಸ್ತಾನ, ಕರ್ಗಿಸ್ತಾನ್, ಮತ್ತು ತಜಕಿಸ್ತಾನ್ ಕ್ಕೆ ನೌಕರರು ಪ್ರವಾಸ ಕೈಕೊಳ್ಳಬಹುದಾಗಿದೆ. ಇದರ ಆಧಾರದಲ್ಲಿ ಅಂದರೆ ಎಲ್ ಟಿಸಿ (ಲೀವ್ ಟ್ರಾವೆಲ್ ಕನ್ಸೆಷನ್) ಪ್ರಯಾಣದ ಮೇಲೆ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದು.
ಏಷ್ಯಾ ರಾಷ್ಟ್ರಗಳೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ವಿದೇಶಗಳಲ್ಲಿಯೂ ಭಾರತದ ಆಚರಣೆ, ವಿಚಾರ ಪಸರಿಸಲು ಕೇಂದ್ರ ಸರಕಾರ ಹೊಸ ಆಲೋಚನೆಗೆ ಮುಂದಾಗಿದೆ. ಸಾರ್ಕ್ ರಾಷ್ಟ್ರಗಳೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಹೋಗುವುದು ಇದರ ಹಿಂದಿರುವ ಉದ್ದೇಶ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.