ಡ್ರೈವರ್‌ ಆತ್ಮಹತ್ಯೆ ಪ್ರಕರಣ, 'ಗಂಡ-ಹೆಂಡ್ತಿ ನಡುವೆ ಗಲಾಟೆ ಇತ್ತು' ತಾನೇ ತನಿಖೆ ಮಾಡಿ ತೀರ್ಪು ಕೊಟ್ಟ NWKRTC!

Published : Apr 02, 2025, 03:10 PM ISTUpdated : Apr 02, 2025, 03:51 PM IST
ಡ್ರೈವರ್‌ ಆತ್ಮಹತ್ಯೆ ಪ್ರಕರಣ, 'ಗಂಡ-ಹೆಂಡ್ತಿ ನಡುವೆ ಗಲಾಟೆ ಇತ್ತು' ತಾನೇ ತನಿಖೆ ಮಾಡಿ ತೀರ್ಪು ಕೊಟ್ಟ NWKRTC!

ಸಾರಾಂಶ

ಬೆಳಗಾವಿಯಲ್ಲಿ ರಜೆ ಸಿಗದಿದ್ದಕ್ಕೆ ಬಸ್ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಡ್ರೈವರ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.

ಬೆಳಗಾವಿ (ಏ.2): ಬೆನ್ನುನೋವಿನ ಸಮಸ್ಯೆ ಹಾಗೂ ಅಕ್ಕನ ಮಗಳ ಮದುವೆಗೆ ರಜೆ ಕೊಡದಿದ್ದಕ್ಕೆ ಬೆಳಗಾವಿಯಲ್ಲಿ ಬಸ್ ಡ್ರೈವರ್ ಆತ್ಮಹತ್ಯೆ  ಪ್ರಕರಣದ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಪತ್ರಿಕಾ ಪ್ರಕಟಣೆ ನೀಡಿ ಸ್ಪಷ್ಟ ನೀಡುವ ಪ್ರಯತ್ನ ಮಾಡಿದೆ. ಇಡೀ ಪ್ರಕರಣದ ಬಗ್ಗೆ ಮಾತನಾಡುವ ಹೊರತಾಗೊ ಬಸ್‌ ಡ್ರೈವರ್‌ನ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟು ತನ್ನದೇನೂ ತಪ್ಪಿಲ್ಲ ಎನ್ನುವಂತೆ ಸ್ಪಷ್ಟೀಕರಣ ನೀಡಿದೆ.

ರಜೆ ಕೊಡದಿದ್ದಕ್ಕೆ ಚಾಲಕ ಬಾಲಚಂದ್ರ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡುವ ಭರದಲ್ಲಿ ಮೃತ ವ್ಯಕ್ತಿಯ ವೈಯಕ್ತಿಕ ವಿಚಾರಗಳ ಬಗ್ಗೆ ಸಂಸ್ಥೆ ತಲೆತೂರಿಸಿದೆ. ಹೆಂಡತಿ ಕಿರುಕುಳದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ರಿಕಾ ಪ್ರಕಟಣೆ ನೀಡಿದೆ.

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?: ವಾಕರಸಾ ಸಂಸ್ಥೆ ಬೆಳಗಾವಿ‌ 2ನೇ ಘಟಕದಲ್ಲಿ ಇಂದು ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 7 ಗಂಟೆಗೆ ಸುಮಾರಿಗೆ 48 ವರ್ಷದ ಬಾಲಚಂದ್ರ ಎಸ್ ತುಕ್ಕೋಜಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟಕದಲ್ಲಿ ನಿಂತ ವಾಹನದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ನಂತರ ಮಾರ್ಕೆಟ್ ಪೊಲೀಸ್ ಠಾಣೆಯವರಿಗೆ ಮಾಹಿತಿ‌ ನೀಡಲಾಗಿದೆ. ಚಾಲಕ ಬಾಲಚಂದ್ರ  19 ವರ್ಷಗಳಿಂದ ಈ ಘಟಕದಲ್ಲಿ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಹಂತದಲ್ಲಿಯೂ‌  ಘಟಕ‌ ವ್ಯವಸ್ಥಾಪಕರು ಅಥವಾ ಸಂಸ್ಥೆಯ ಅಧಿಕಾರಿಗಳೊಂದಿಗೆ ಯಾವುದೇ ಗಲಾಟೆ ಮಾಡಿಕೊಂಡಿಲ್ಲ.

ಮಾರ್ಚ್‌ 17 ರಿಂದ 27ರವರೆಗೆ ಅವರಿಗೆ ರಜೆ ನೀಡಲಾಗಿತ್ತು.  ಅದೇ ರೀತಿ ಮಾರ್ಚ್‌ 29, 30 ರಂದು ಅವರು ಕರ್ತವ್ಯಕ್ಕೆ ಬಂದಿಲ್ಲ.ಆದರೂ, ಅವರಿಗೆ‌ ರಜೆ ಮಂಜೂರಾತಿಗಾಗಿ ಕ್ರಮವಹಿಸಲಾಗಿದೆ. ಮಾರ್ಚ್ 31, ಏಪ್ರಿಲ್‌ 1 ರಂದು ಎಂದಿನಂತೆ ಚಾಲಕರು ಕರ್ತವ್ಯ ನಿರ್ವಹಿಸಿದ್ದಾರೆ.ಮೃತರ ತಾಯಿ ಯಲ್ಲವ್ವ ಮತ್ತು ಮೃತರ ಸಹೋದರಿ‌ ಘಟನಾ ಸ್ಥಳಕ್ಕೆ ಬಂದಿದ್ದಾರೆ ಎಂದು ತಿಳಿಸಿದೆ.

ಮೃತರಾದ ಬಾಲಚಂದ್ರ ಮತ್ತು ಅವನ ಹೆಂಡತಿ ಶ್ರೀಮತಿ ಶಿಲ್ಪಾ ಇವರಿಗೆ ಕಳೆದ 10 ವರ್ಷಗಳಿಂದ ವಿಪರಿತ ಕೌಟುಂಬಿಕ ವೈಷಮ್ಯ ಇತ್ತು. ಬಾಲಚಂದ್ರ ಅವರ ತಾಯಿಯನ್ನು ಹಾಗೂ ‌ಸಹೋದರಿಯನ್ನು ಭೇಟಿಯಾಗಬಾರದು. ಸಣ್ಣ ಪುಟ್ಟ ಸಹಾಯ ಮಾಡಿದರೂ ಅವನೊಂದಿಗೆ ವಿಪರಿತ ಜಗಳ ಮಾಡುತ್ತಿದ್ದರು. ಅವನಿಗೆ‌‌ ಹಿಂಸೆ ಮಾಡುತ್ತಿದ್ದರು. ಅವನ ಹೆಂಡತಿ ಮತ್ತು ಅವರ ತಾಯಿಯ ಹಿಂಸೆಯಿಂದಲೇ ನನ್ನ ಮಗನು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ರೆಡ್ಡಿಗಾರು ಇಲ್ನೋಡಿ.. ರಜೆ ನೀಡದ್ದಕ್ಕೆ ಬಸ್‌ನಲ್ಲೇ ಪ್ರಾಣಬಿಟ್ಟ ಡ್ರೈವರ್‌, ಪ್ರಜ್ಞೆ ತಪ್ಪಿ ಬಿದ್ದ ಪತ್ನಿ!

ಅವರಿಬ್ಬರ ಮೇಲೆ ಪೋಲಿಸ್ ಎಫ್ ಐ ಆರ್ ದಾಖಲಿಸುವಂತೆ  2 ಗಂಟೆಗಳಿಂದ ಕೇಳಿಕೊಳ್ಳುತ್ತಿದ್ದಾರೆ.  ಈ ಕುರಿತು ಬೆಳಗಾವಿ ಮಾರ್ಕೆಟ್ ಪೊಲಿಸ್ ಠಾಣೆಯ ಅಧಿಕಾರಿಗಳು ಎಲ್ಲ ಮಾಹಿತಿ ಪಡೆದು ಪ್ರಾಥಮಿಕ ಹಂತದ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಕನ್ನಡಿಗರಿಗೆ ಕುಡಿಯಲು ನೀರಿಲ್ಲ, ಕೃಷ್ಣ-ಭೀಮಾ ನದಿಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿದ್ದರಾಮಯ್ಯ!

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಪೂರ್ಣ ಪಾಠ

 

ವಾಕರಸಾ ಸಂಸ್ಥೆ ಬೆಳಗಾವಿ‌ 2ನೇ ಘಟಕದಲ್ಲಿ ದಿನಾಂಕ: 2-4-2025 ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಶ್ರೀ ಬಾಲಚಂದ್ರ ಎಸ್ ತುಕ್ಕೋಜಿ‌ ಚಾಲಕ ವಯಸ್ಸು 48 ರವರು ಬೆಳಿಗ್ಗೆ ‌ಘಟಕದಲ್ಲಿ ನಿಂತ ವಾಹನದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದು ಗಮನಕ್ಕೆ ಬಂದು‌ ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯವರಿಗೆ ಮಾಹಿತಿ‌ ನೀಡಿದ್ದು, ಈ ಕುರಿತು ಪೊಲಿಸ್ ಅಧಿಕಾರಿಗಳು ಮುಂದಿನ ಕ್ರಮ ವಹಿಸಿದ್ದರು.

ಸದರಿ ಚಾಲಕರು 2ನೇ ಘಟಕದಲ್ಲಿ 19 ವರ್ಷಗಳಿಂದ ಕರ್ತವ್ಯ ‌ನಿರ್ವಹಿಸುತ್ತಿದ್ದು, ಯಾವುದೇ ಹಂತದಲ್ಲಿಯೂ‌ ಸಹ‌ ಅವರು‌ ಘಟಕ‌ ವ್ಯವಸ್ಥಾಪಕರು ಅಥವಾ ಸಂಸ್ಥೆಯ ಅಧಿಕಾರಿಗಳೊಂದಿಗೆ ತಂಟೆ ತಕರಾರು ಇಲ್ಲದೇ ತಮ್ಮ ಕರ್ತವ್ಯವನ್ನು ‌ಉತ್ತಮ ರೀತಿಯಲ್ಲಿ ನಿರ್ವಹಿಸುತ್ತ ಬಂದಿರುತ್ತಾರೆ. 

ದಿನಾಂಕ 17-3-2025 ರಿಂದ 27-3-25 ರವರೆಗೆ ಅವರಿಗೆ ರಜೆ‌ ನೀಡಿದ್ದು, ಅದೇ ರೀತಿ ದಿನಾಂಕ :29-3-25 ರಿಂದ 30-3-25 ರಂದು ಅವರು ಕರ್ತವ್ಯಕ್ಕೆ ಬಾರದೇ ಇದ್ದರೂ‌ ಸಹ‌ ಅವರಿಗೆ‌ ನಂತರದಲ್ಲಿ‌‌ ಅವರಿಗೆ‌ ರಜೆ ಮಂಜೂರಾತಿಗಾಗಿ ಕ್ರಮವಹಿಸಲಾಗಿದೆ. 

ದಿನಾಂಕ: 31-3-25 & 1-4-2025 ಗಳಂದು ಸದರಿ ಚಾಲಕರು ಕರ್ತವ್ಯ. ನಿರ್ವಹಿಸಿರುತ್ತಾರೆ‌. 

ಮೃತರ ತಾಯಿ ಶ್ರೀಮತಿ ಯಲ್ಲವ್ವ ಮತ್ತು ಮ್ರತರ ಸಹೋದರಿ‌ಅವರು ಘಟನಾ ಸ್ಥಳಕ್ಕೆ ಬಂದು ಮ್ರತರಾದ ಶ್ರೀ ಬಾಲಚಂದ್ರ ಮತ್ತು ಅವನ ಹೆಂಡತಿ ಶ್ರೀಮತಿ ಶಿಲ್ಪಾ ಇವರಿಗೆ ಕಳೆದ 10 ವರ್ಷಗಳಿಂದ ವಿಪರಿತ ಕೌಟುಂಬಿಕ ವೈಷಮ್ಯ ಇತ್ತು,  ಮೃತನ ಹೆಂಡತಿ ಶ್ರೀ ಬಾಲಚಂದ್ರ ಅವರ ತಾಯಿಯನ್ನು ಹಾಗೂ ‌ಸಹೋದರಿಯನ್ನು ಭೇಟಿಯಾಗುವದಕ್ಕೆ ಮತ್ತು‌ ಸಣ್ಣ ಪುಟ್ಟ ಸಹಾಯ ಮಾಡಿದರೇ,‌ ಅವನೊಂದಿಗೆ ವಿಪರಿತ ಜಗಳ ಕಾಯ್ದು ಅವನಿಗೆ‌‌ ಹಿಂಸೆ ಮಾಡಿದ್ದರಿಂದಲೇ ಅವನ ಹೆಂಡತಿ ಮತ್ತು ಅವರ ತಾಯಿಯ ಹಿಂಸೆಯಿಂದಲೇ ನನ್ನ ಮಗನು ಆತ್ಮ ಹತ್ಯೆ ಮಾಡಿಕೊಂಡಿರುವದಾಗಿ ತಿಳಿಸಿದ್ದು, ಅವರಿಬ್ಬರ ಮೇಲೆ ಪೋಲಿಸ್ ಎಫ್ ಐ ಆರ್ ದಾಖಲಿಸುವಂತೆ ಕಳೆದ ಸುಮಾರು 2 ಗಂಟೆಗಳಿಂದ ರೋದಿಸುತ್ತಿದ್ದಾರೆ. 

ಈ ಕುರಿತು ಬೆಳಗಾವಿ ಮಾರ್ಕೆಟ್ ಪೊಲಿಸ್ ಠಾಣೆಯ ಅಧಿಕಾರಿಗಳು ಎಲ್ಲ ಮಾಹಿತಿ ಪಡೆದು ಪ್ರಾಥಮಿಕ ಹಂತದ ತನಿಖೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ. 

 ಪೋಲಿಸ್ ಎಫ್.ಐ.ಆರ್ ಪಡೆದು ಪ್ರಕರಣದ‌ ಮುಂದಿನ ಮಾಹಿತಿ ನೀಡಲಾಗುವದು.

ವಿಭಾಗೀಯ ನಿಯಂತ್ರಣಾಧಿಕಾರಿ,
ವಾಕರಾರಸಂಸ್ಥೆ ಬೆಳಗಾವಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ನಿಷೇಧ ಕಾಯ್ದೆ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇವೆ: ಪ್ರಮೋದ್ ಮುತಾಲಿಕ್
ಮರ್ಯಾದೆಗೇಡು ಹ*ತ್ಯೆಗೆ ದಲಿತ ಸಂಘಟನೆಗಳ ಕಿಚ್ಚು: ಪೊಲೀಸ್‌ ಸರ್ಪಗಾವಲಿನಲ್ಲಿ ಯುವತಿ ಅಂತ್ಯಕ್ರಿಯೆ