
ಕೋಲ್ಕತಾ(ಮಾ.10): ದೇಶದ ಅತಿದೊಡ್ಡ ತೇಲುವ ಸೋಲಾರ್ ಘಟಕ ಕೇರಳದಲ್ಲಿ ಶುಕ್ರವಾರ ಕಾರ್ಯಾರಂಭ ಮಾಡಿದೆ. ಕೇರಳದ ಕಾಯಂಕುಲಂನಲ್ಲಿರುವ ರಾಜೀವ್‌ಗಾಂ ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್‌ನಲ್ಲಿ ನ್ಯಾಷನಲ್ ಟರ್ಮಿನಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ತೇಲುವ ಸೋಲಾರ್ ಘಟಕವನ್ನು ಸ್ಥಾಪನೆ ಮಾಡಿದೆ. ಈ ಘಟಕದಿಂದ 100 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಈ ಸೋಲಾರ್ ಘಟಕವನ್ನು ಅಭಿವೃದ್ಧಿ ಪಡಿಸಲಾಗಿದೆ. ಭೂಮಿಗೆ ಜೋಡಿಸಲ್ಪಟ್ಟಿರುವ ತೇಲುವ ಹಲಗೆಗಳ ಮೇಲೆ ಸೋಲಾರ್ ಲಕಗಳನ್ನು 22 ದಿನಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಜಮೀನು ಉಳಿತಾಯವಾಗುವುದರ ಜತೆಗೆ ಹೆಚ್ಚು ದಕ್ಷತೆಯಿಂದ ಕೂಡಿದೆ. ತೇಲುವ ವೇದಿಕೆಯನ್ನು ಎನ್‌ಟಿಪಿಸಿಯ ಇಂಧನ ತಂತ್ರಜ್ಞಾನ ಸಂಶೋಧನಾ ವಿಭಾಗ ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿದೆ. ಈ ರೀತಿಯ ತೇಲುವ ಸೋಲಾರ್ ಘಟಕಗಳನ್ನು ಉಪ್ಪು ನೀರಿನ ಪರಿಸರದಲ್ಲೂ ಅಳವಡಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.