
ವಾಷಿಂಗ್ಟನ್ (ಮಾ.10): ಆರು ಮುಸ್ಲಿಮ್ ದೇಶಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶವನ್ನು ನಿರ್ಬಂಧಿಸಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಪರಿಷ್ಕೃತ ಆದೇಶಕ್ಕೂ ದೇಶದ ಒಳಗಿನಿಂದಲೇ ಕಾನೂನಿನ ತೊಡಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಟ್ರಂಪ್'ರ ಪರಿಷ್ಕೃತ ಆದೇಶವನ್ನು ತಡೆಯಲು ಅಮೆರಿಕಾದ ಹವಾಯಿ ರಾಜ್ಯವು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ವಾಷಿಂಗ್ಟನ್ ರಾಜ್ಯವು ಕೂಡಾ ಆದೇಶವನ್ನು ಪ್ರಶ್ನಿಸಲು ನಿರ್ಧರಿಸಿದೆ.
ಅಧ್ಯಕ್ಷರ ಕ್ರಮದ ವಿರುದ್ಧ ಕಾನೂನು ಸಮರದಲ್ಲಿ ಜತೆ ಸೇರಲು ಒರೆಗಾನ್ ಹಾಗೂ ನ್ಯೂಯಾರ್ಕ್ ರಾಜ್ಯಗಳಿಗೂ ಕೇಳಿಕೊಂಡಿದ್ದೇವೆ ಎಂದು ವಾಷಿಂಗ್ಟನ್ ಅಟಾರ್ನಿ ಜನರಲ್ ಬಾಬ್ ಫರ್ಗುಸನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರಪ್ರಥಮ ಬಾರಿಗೆ ಪ್ರವೇಶ ನಿರ್ಬಂಧವನ್ನು ಹೇರಿದಾಗ ಮೊತ್ತಮೊದಲು ವಿರೋಧಿಸಿದ್ದು ವಾಷಿಂಗ್ಟನ್ ರಾಜ್ಯ. ಬಳಿಕ ನ್ಯಾಯಾಲಯವು ಟ್ರಂಪ್ ಆದೇಶವನ್ನು ತಡೆಹಿಡಿದಿತ್ತು.
ಸೋಮಾಲಿಯಾ, ಇರಾನ್, ಸಿರಿಯಾ, ಸುಡಾನ್, ಲಿಬಿಯಾ ಹಾಗೂ ಯೆಮೆನ್ ದೇಶದ ಪ್ರಜೆಗಳಿಗೆ ಅಮೆರಿಕಾ ಪ್ರವೇಶವನ್ನು ನಿರ್ಬಂಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ಅದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.
ಪರಿಷ್ಕೃತ ಆದೇಶದಲ್ಲಿ ಈಗಾಗಲೇ ಅಮೆರಿಕಾ ವೀಸಾ ಹೊಂದಿರುವ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.