ಕೇಂದ್ರ ಸರ್ಕಾರದಿಂದ ಆರ್ಟಿಕಲ್ 370 ರದ್ದತಿ ನಿರ್ಧಾರ| ರಾಜ್ಯಸಭೆಯಲ್ಲಿ ಕಾಶ್ಮೀರ ಮೂಸೂದೆ ಮಂಡಿಸಿದ ಅಮಿತ್ ಶಾ| ಕಾಶ್ಮೀರ ಭದ್ರತೆ ಉಸ್ತುವಾರಿ ಹೊತ್ತ ರಾಷ್ಟ್ರೀಯ ಭಧ್ರತಾ ಸಲಹೆಗಾರ| ಕಾಶ್ಮೀರದಿಂದ ಗ್ರೌಂಡ್ ರಿಪೋರ್ಟ್ ಕಳುಹಿಸಿದ ಅಜಿತ್ ಧೋವಲ್| ಕೇಂದ್ರದ ನಿರ್ಣಯಕ್ಕೆ ಸ್ಥಳೀಯ ಜನರಿಂದ ಬೆಂಬಲ ಎಂದ ಧೋವಲ್| ಕೇಂದ್ರ ಗೃಹ ಸಚಿವರ ಕೈ ಸೇರಿದ ಅಜಿತ್ ಧೋವಲ್ ರಿಪೋರ್ಟ್|
ಶ್ರೀನಗರ(ಆ.06): ಇತ್ತ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಮಸೂದೆ ಮಂಡಿಸಿ ಐತಿಹಾಸಿಕ ಚರ್ಚೆಗೆ ನಾಂದಿ ಹಾಡಿದ್ದಾರೆ.
ಅತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕಣಿವೆ ರಾಜ್ಯದ ಭಧ್ರತಾ ಉಸ್ತುವಾರಿ ಹೊತ್ತು ಶಾಂತಿ ಸ್ಥಾಪನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.
undefined
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ರದ್ದತಿಗೆ ಕೇಂದ್ರ ಸರ್ಕಾರದ ಪೂರ್ವ ತಯಾರಿ ನಿಜಕ್ಕೂ ಮೆಚ್ಚುವಂತದ್ದು. ರಾಜ್ಯಸಭೆಯಲ್ಲಿ ಮಸೂದೆ ಮಂಡನೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಚರ್ಚೆ ನಡೆಸಿದ್ದರು.
ಅದರಂತೆ ಈಗಾಗಲೇ ರಾಜೀವ್ ಗೌಬಾ ರಾಜ್ಯ ಪ್ರವಾಸ ಮುಗಿಸಿ ಅಮಿತ್ ಶಾ ಅವರಿಗೆ ಗ್ರೌಂಡ್ ರಿಪೋರ್ಟ್ ನೀಡಿದ್ದಾರೆ. ಇದೀಗ ಕಾಶ್ಮೀರ ಸುತ್ತುವ ಸರದಿ ಅಜಿತ್ ಧೋವಲ್ ಅವರದ್ದಾಗಿದ್ದು, ಇಡೀ ಕಣಿವೆ ಶಾಂತವಾಗಿದೆ ಎಂದು ಧೋವಲ್ ಕೇಂದ್ರ ಗೃಹ ಸಚಿವರಿಗೆ ಸಂದೇಶ ರವಾನಿಸಿದ್ದಾರೆ.
ಕಾಶ್ಮೀರ ಪ್ರವಾಸದಲ್ಲಿರುವ ಅಜಿತ್ ಧೋವಲ್ ಕಣಿವೆಯ ಸ್ಥಿತಿಗತಿ ಕುರಿತು ಅಮಿತ್ ಶಾ ಅವರಿಗೆ ವರದಿ ಸಲ್ಲಿಸಿದ್ದಾರೆ. ಕಣಿವೆ ಶಾಂತವಾಗಿದ್ದು, ಸ್ಥಳೀಯ ಜನ ಕೂಡ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಧೋವಲ್ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.