
ನವದೆಹಲಿ(ಮಾ.21): ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಸಂಚಾರ ನಿಯಮದಲ್ಲಿ ಭಾರೀ ಬದಲಾವಣೆ ತಂದಿರುವ ಕೇಂದ್ರದ ಮತ್ತೊಂದು ಮಹತ್ವದ ಯೋಜನೆ ಏ.1 ರಿಂದ ಜಾರಿಗೆ ಬರಲಿದೆ. ಈ ಯೋಜನೆ ಅನ್ವಯ ಹೊಸದಾಗಿ ಮಾರಾಟವಾಗುವ ಎಲ್ಲಾ ದ್ವಿಚಕ್ರ ವಾಹನಗಳಲ್ಲೂ ‘ಆಟೋಮ್ಯಾಟಿ ಕ್ ಹೆಡ್‌ಲ್ಯಾಂಪ್ ಆನ್ ವ್ಯವಸ್ಥೆ ಕಡ್ಡಾಯವಾಗಿರಲಿದೆ.
ಏನಿದು ಎಎಚ್‌ಒ?:
‘ಆಟೋಮ್ಯಾ ಟಿಕ್ ಹೆಡ್‌ಲ್ಯಾಂಪ್ ಆನ್ (ಎಎಚ್‌ಒ)' ಎಂದರೆ ಗಾಡಿಯನ್ನು ಸ್ಟಾರ್ಟ್ ಮಾಡಿದ ತಕ್ಷಣ ಸ್ವಯಂ ಚಾಲಿತ ಹೆಡ್‌ಲ್ಯಾಂಪ್ ಆನ್ ಆಗಲಿದೆ. ಇದರೊಂದಿಗೆ ಇನ್ಮುಂದೆ ದ್ವಿಚಕ್ರ ವಾಹನಗಳಲ್ಲಿ ಇದ್ದಂತಹ ಹೆಡ್‌ಲೈಟ್ ಆನ್ ಮತ್ತು ಆಫ್ ಮಾಡುವ ಬಟನ್ ಇಲ್ಲವಾಗಲಿದೆ. ಇದರಿಂದ ಅಪಘಾತ ತಪ್ಪುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ಹಳೆಯ ಬೈಕ್ ಕಥೆ ಏನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ.
ಈ ನಡುವೆ ಇಂಥ ನಿಯಮದ ಕುರಿತು ಕೇಂದ್ರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಕರ್ನಾಟಕದ ಸಾರಿಗೆ ಇಲಾಖೆ ಆಯುಕ್ತ ಅಯ್ಯಪ್ಪ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.