
ನವದೆಹಲಿ: ಪ್ರಯಾಣಿಕರು ತಾವು ಕಾಯ್ದಿರಿಸಿದ ರೈಲ್ವೆ ಟಿಕೆಟ್‌ಗಳನ್ನು ಕುಟುಂಬದ ಇತರ ಸದಸ್ಯ ಅಥವಾ ತಮ್ಮ ಸ್ನೇಹಿತರಿಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಈ ಮೂಲಕ ಕೊನೇ ಕ್ಷಣದಲ್ಲಿ ಪ್ರಯಾಣ ರದ್ದುಗೊಂಡಲ್ಲಿ, ಯಾವುದೇ ವ್ಯಕ್ತಿ ಕಾಯ್ದಿರಿಸಿದ ಟಿಕೆಟ್ ಅನ್ನು ರದ್ದುಗೊಳಿಸುವ ಬದಲಿಗೆ ಇತರರಿಗೆ ವರ್ಗಾಯಿಸುವ ಅನುಕೂಲ ಒದಗಿಸಿಕೊಟ್ಟಿದೆ. ರೈಲ್ವೆ ನಿಲ್ದಾಣದ ನಿರ್ಧರಿತ ಅಧಿಕಾರಿಯ ಬಳಿ ಲಿಖಿತ ಕೋರಿಕೆ ಸಲ್ಲಿಸಿ ಟಿಕೆಟ್ ವರ್ಗಾಯಿಸಬಹುದು.
ಇದಕ್ಕಾಗಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಕೆಲವು ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ. ಈ ರೈಲ್ವೆ ಟಿಕೆಟ್‌ನಲ್ಲಿ ಹೆಸರು ಬದಲಾವಣೆ ಮಾಡಬೇಕಾದ ಮಾರ್ಗಸೂಚಿಗಳು ಇಂತಿವೆ.
- ಟಿಕೆಟ್ ಪಡೆದ ವ್ಯಕ್ತಿಯೊಬ್ಬರು, ತಮ್ಮ ಕುಟುಂಬ ಸದಸ್ಯರಾದ ಅಪ್ಪ, ಅಮ್ಮ, ಸೋದರ-ಸೋದರಿ, ಪುತ್ರ, ಮಗಳು, ಪತ್ನಿ ಅಥವಾ ಪತಿಗೆ ವರ್ಗಾವಣೆ ಮಾಡಬಹುದು.
- ಸರ್ಕಾರಿ ಅಧಿಕಾರಿಗಳು ಕರ್ತವ್ಯದ ಮೇಲೆ ತೆರಳುತ್ತಿದ್ದ ವೇಳೆ, ಬದಲಿ ಅಧಿಕಾರಿಯ ಹೆಸರಿಗೆ, ರೈಲು ಹೊರಡುವ 24 ಗಂಟೆಗಳ ಮುನ್ನ ಟಿಕೆಟ್ ಬದಲಾಯಿಸಬಹುದು.
- ಪ್ರಯಾಣಿಕರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಾಗಿದ್ದ ಸಂದರ್ಭಗಳಲ್ಲಿ, ಓರ್ವ ವಿದ್ಯಾರ್ಥಿಯ ಟಿಕೆಟ್ ಅನ್ನು ಮತ್ತೋರ್ವ ವಿದ್ಯಾರ್ಥಿ ಹೆಸರಿಗೆ ಬದಲಾವಣೆ ಮಾಡುವಂತೆ ಕೋರಿ ಆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ರೈಲು ಹೊರಡುವ ಸಮಯಕ್ಕಿಂತ 48 ಗಂಟೆಗಳ ಕಾಲ ಮುನ್ನ ಪತ್ರ ಬರೆದು, ವಿನಂತಿಸಿಕೊಳ್ಳಬೇಕು. ಇನ್ನು ಎನ್‌ಸಿಸಿ ಗುಂಪುಗಳಲ್ಲಿನ ಸದಸ್ಯರಿಗೂ ರೈಲ್ವೆ ಟಿಕೆಟ್ ವರ್ಗಾವಣೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಎನ್‌ಸಿಸಿ ಅಧಿಕಾರಿಯೇ ಪತ್ರ ಬರೆದು ಕೋರಿಕೊಳ್ಳಬೇಕು.
- ವಿವಾಹಕ್ಕೆ ತೆರಳುವ ತಂಡದ ಮುಖ್ಯಸ್ಥರು, ಯಾವುದೇ ವ್ಯಕ್ತಿಯ ಬದಲಿಗೆ ಇನ್ನೊಬ್ಬ ವ್ಯಕ್ತಿಗೆ ಟಿಕೆಟ್ ವರ್ಗಾಯಿಸಬಹುದು.
- ವಿದ್ಯಾರ್ಥಿಗಳು, ಮದುವೆ ಕಾರ್ಯಕ್ರಮ ಮತ್ತು ಎನ್‌ಸಿಸಿ ಕೆಡೆಟ್‌ಗಳ ಟಿಕೆಟ್‌ಗಳ ಮೇಲಿನ ಹೆಸರು ಬದಲಾವಣೆಗೆ ಶೇ.10ರಷ್ಟುಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.