
ಬೆಂಗಳೂರು (ಸೆ.24): ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್ ಎಸ್ ಆಸ್ಪತ್ರೆಗೆ ನೋಟಿಸ್ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಸರ್ಕಾರಿ ಖರಾಬು ಭೂಮಿ ಒತ್ತುವರಿ ಮಾಡಿ ದೊಡ್ಡವರಿಗೆ ಮುಂದಿನ 2 ದಿನಗಳಲ್ಲಿ ನೋಟಿಸ್ ನೀಡಿ ಚುರುಕು ಮುಟ್ಟಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐಡಿಯಲ್ ಹೋಮ್ಸ್ನಲ್ಲಿ 7 ಎಕರೆ 31 ಗುಂಟೆ ಸರ್ಕಾರಿ ಒತ್ತುವರಿ ಜಾಗವನ್ನ ವಶಕ್ಕೆ ಪಡೆಯಲು ನಿರ್ಧರಿಸಿರೊ ಜಿಲ್ಲಾಡಳಿತ ಸದ್ಯ ನೋಟಿಸ್ ನೀಡಲು ತೀರ್ಮಾನಿಸಿದೆ.
ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಒತ್ತುವರಿದಾರರಿಗೆ ಸೆ.26 ರಂದು ನೋಟಿಸ್ ನೀಡೊದನ್ನ ಖಚಿತ ಪಡಿಸಿದ್ದಾರೆ.
ಈ ಪ್ರಕಾರ ನಟ ದರ್ಶನ್ ಹಾಗೂ ಎಸ್ ಎಸ್ ಆಸ್ಪತ್ರೆಯೂ ಒತ್ತುವರಿ ಜಾಗದಲ್ಲಿದೆ ಅನ್ನೊದು ಸಾಬೀತಾಗಿದೆ.
ಸುವರ್ಣನ್ಯೂಸ್ ದಾಖಲೆ ಸಮೇತ ಒತ್ತುವರಿ ಬಗ್ಗೆ ವರದಿಯನ್ನು ಪ್ರಸಾರ ಮಾಡಿತು. ಸುವರ್ಣನ್ಯೂಸ್ ವರದಿಗೆ ಮೊದಲ ಇಂಪ್ಯಾಕ್ಟ್ ಸಿಕ್ಕಂತೆ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.