ಬೀದರ್`ನಲ್ಲಿ ವರುಣನ ಆರ್ಭಟ: ಮೋಳಗೆ ಮಾರಯ್ಯ ಗುಹೆಯ ಶಿವಲಿಂಗಕ್ಕೂ ಜಲಾಭಿಷೇಕ

By internet deskFirst Published Sep 24, 2016, 2:13 PM IST
Highlights

ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದ ಮೋಳಗೆ ಮಾರಯ್ಯಗುಹೆಯ ಶಿವಲಿಂಗ ಸಂಪೂರ್ಣ ಮುಳುಗಿ ಹೋಗಿವೆ

ಬೀದರ್(ಸೆ.24): ಉತ್ತರ ಕರ್ನಾಟಕದಲ್ಲಿ ಉತ್ತರೆ ಮಳೆಯ ಆರ್ಭಟ ಜೋರಾಗಿದೆ. ಬಾನಿಗೆ ತೂತು ಬಿದ್ದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೀದರ್ ಜಿಲ್ಲೆಯ ಧಾರಾಕಾರ ಮಳೆಗೆ ಹತ್ತಾರು ಗ್ರಾಮಗಳು ಜಲಾವೃತಗೊಂಡಿದ್ದು  ಪ್ರವಾಹದ ಸ್ಥಿತಿ ಏರ್ಪಟ್ಟಿದೆ.

ಭಾಲ್ಕಿ ತಾಲೂಕಿನ ದಾಡಗಿ ಸೇತುವೆ ಮುಳುಗಡೆಯಾಗಿದ್ದು  ಹುಮನಾಬಾದ್​ ಭಾಲ್ಕಿ ಸಂಚಾರ ಸ್ತಬ್ಧವಾಗಿದೆ..

Latest Videos

ರಸ್ತೆಗಳಲ್ಲಿ, ಮನೆಗಳ ಮುಂದೆ, ಮೊಣಕಾಲಿನವರೆಗೆ ನೀರು ಹರೀತಿದೆ. ಮನೆಯೊಳಗೆ ನೀರು ನುಗ್ಗಿ, ಪಾತ್ರೆ ಸಾಮಾನುಗಳು ತೇಲಿಹೋಗಿವೆ. ಮಹಿಳೆಯರು, ವೃದ್ಧರು, ಮಕ್ಕಳು ಕೂಡ ನೀರಿನಲ್ಲೇ ಚೇರ್ ಹಾಕಿಕೊಂಡು ಕೂತು, ಪಾತ್ರೆಗಳಲ್ಲಿ ನೀರನ್ನ ಹೊರ ಚೆಲ್ಲುತ್ತಿದ್ದಾರೆ.

ಇತ್ತ, ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದ ಮೋಳಗೆ ಮಾರಯ್ಯಗುಹೆಯ ಶಿವಲಿಂಗ ಸಂಪೂರ್ಣ ಮುಳುಗಿ ಹೋಗಿವೆ. ಮುಂಗಾರು ಮುಗಿಯುವ ಮೊದಲ ಸುರೀತಿರೋ ಭಾರೋ ಮಳೆಯಿಂದಾಗಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಶಿವಲಿಂಗ ಹತ್ರ ಭೂಮಿಯಿಂದ ನೀರು ಜಿನುಗುತ್ತಿದ್ದು, ದೇಗುಲ ಜಲಾವೃತಗೊಂಡಿದೆ. ಎರಡು ಅಡಿ ಎತ್ತರದ ಶಿವಲಿಂಗ ಮುಳುಗಡೆಯಾಗಿದೆ. ರೈತರು ನಂಬಿದ್ದ  ಸೋಯಾ, ಉದ್ದು, ಹೆಸರು ಮುಂಗಾರು ಬೆಳೆಗಳು ನಾಶವಾಗಿದ್ದು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. 

ಒಟ್ನಲ್ಲಿ ಜನಜೀವನ ಬೀದರ್ ಜಿಲ್ಲೆಯಾದ್ಯಂತ ಸಂಪುರ್ಣ ಅಸ್ತವ್ಯಸ್ತವಾಗಿದೆ. ಹತ್ತಾರು ಗ್ರಾಮಗಳು ಜಲಾವೃತಗೊಂಡು ಇದೇ ರೀತಿಯ ಪ್ರವಾಹದ ಪರಿಸ್ಥಿತಿ ಮುಂದುವರಿದ್ರೆ ಸಾವು ನೋವು ಸಂಭವಿಸುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

click me!