ಇಮ್ರಾನ್ ಖಾನ್ ಹೊಸ ರಾಗ: ನೋಬಲ್ ಪ್ರಶಸ್ತಿಗೆ ನಾನು ಅನರ್ಹ, ಆದರೆ...?

By Web DeskFirst Published Mar 4, 2019, 3:38 PM IST
Highlights

ನೋಬಲ್ ಪ್ರಶಸ್ತಿಗೆ ನಾನು ಸನರ್ಹ- ಇಮ್ರಾನ್ ಖಾನ್| ಪಾಕ್ ಸಂಸತ್ತಿನಲ್ಲಿ ಕೇಳಿ ಬಂದ ಮನವಿಗೆ ಉತ್ತರಿಸಿದ ಇನಮ್ರಾನ್ ಖಾನ್ ನೀಡಿದ ಸ್ಪಷ್ಟನೆ ಹೀಗಿದೆ.

ಇಸ್ಲಮಾಬಾದ್[ಮಾ.04]: ಪಾಕಿಸ್ತಾನ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಗೆ 'ನೋಬಲ್ ಶಾಂತಿ ಪ್ರಶಸ್ತಿ' ನೀಡಬೇಕೆಂಬ ಪ್ರಸ್ತಾಪ ಕೇಳಿ ಬಂದಿತ್ತು. ಆದರೀಗ ಈ ಬೆಳವಣಿಗೆಯ ಬೆನ್ನಲ್ಲೇ ಪಾಕ್ ಪ್ರಧಾನಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. 


ನೋಬಲ್ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿಡುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ 'ನಾನು ನೋಬಲ್ ಶಾಂತಿ ಪ್ರಶಸ್ತಿ ಸ್ವೀಕರಿಸಲು ಅನರ್ಹ. ಆದರೆ ಕಾಶ್ಮೀರದ ಜನರ ಭರವಸೆಯ ಬೆಳಕಾಗಿ, ಅಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ಶಾಂತಿ ಮತ್ತು ಮಾನವ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಾರೋ ಅವರಿಗೆ ಇದು ಸಲ್ಲಬೇಕು ' ಎಂದಿದ್ದಾರೆ.

I am not worthy of the Nobel Peace prize. The person worthy of this would be the one who solves the Kashmir dispute according to the wishes of the Kashmiri people and paves the way for peace & human development in the subcontinent.

— Imran Khan (@ImranKhanPTI)

ಭಾರತ ಹಾಗೂ ಪಾಕಿಸ್ತಾನದ ನಡುವೆ ಭಾರೀ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗಲೇ ಭಾರತೀಯ ಪೈಲಟ್ ಅಭಿನಂದನ್ ರನ್ನು ಭಾರತಕ್ಕೆ ಮರಳಿಸಿರುವ ಪಾಕ್ ಸರ್ಕಾರದ ಪ್ರಧಾನಿ ಇಮ್ರಾನ್ ಖಾನ್ ಗೆ ನೋಬಲ್ ಶಾಂತಿ ಪ್ರಶಸ್ತಿ ನೀಡಬೇಕೆಂಬ ಪ್ರಸ್ತಾಪ ಪಾಕ್ ಸಂಸತ್ತಿನಲ್ಲಿ ಸಲ್ಲಿಸಲಾಗಿದೆ. ಇಮ್ರಾನ್ ಖಾನ್ ತೆಗೆದುಕೊಂಡ ನಿರ್ಧಾರದಿಂದ ಭಾರತ ಹಾಗೂ ಪಾಕ್ ನಡುವಿನ ಒತ್ತಡವೂ ಕಡಿಮೆಯಾಗಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇಮ್ರಾನ್ ಖಾನ್ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದಾರೆ ಎಂದೂ ಇಲ್ಲಿ ಉಲ್ಲೇಖಿಸಲಾಗಿದೆ.

ಪಾಕ್ ಸಂಸತ್ತಿನಲ್ಲಿ ಕೆಳಿ ಬಂದ ಈ ಮನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪರ ವಿರೋಧಗಳು ವ್ಯಕ್ತವಾಗಿವೆ. 
 

click me!