ಅಮೇಠಿ ಕಾರ್ಖಾನೆ ವಿವಾದ: ಮೋದಿ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

By Web DeskFirst Published Mar 4, 2019, 2:09 PM IST
Highlights

2010ರಲ್ಲಾದ ಕಾರ್ಖಾನೆ ಮರು ಉದ್ಘಾಟನೆ| ಮತ್ತೊಂದು ಸುಳ್ಳು ಹೇಳಲು ನಾಚಿಕೆ ಆಗುವುದಿಲ್ವೇ?| ಮೋದಿ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ

ನವದೆಹಲಿ[ಮಾ.04]: ಪ್ರಧಾನ ಮಂತ್ರಿ ನರೇಂದ್ರ ಭಾನುವಾರ ಅಮೇಠಿಯಲ್ಲಿ ಶಸ್ತ್ರಾಸ್ತ್ರಗಳ ಕಾರ್ಖಾನೆಗೆ ಚಾಲನೆ ನೀಡಿದ್ದಾರೆ. ಆದರೆ ಇಂದು ಸೋಮವಾರ ಮಾ. 04ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹೆಳಿರುವ ಆರೋಪ ಹೊರಿಸಿದ್ದು, ತಾನು ತನ್ನ ಕ್ಷೇತ್ರದಲ್ಲಿ 2010ರಲ್ಲೇ ಈ ಕಾರ್ಖಾನೆಗೆ ಚಾಲನೆ ನೀಡಿದ್ದೇನೆ ಎಂದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಅಮೇಠಿಯ ಶಸ್ತ್ರಾಸ್ತ್ರ ಕಾರ್ಖಾನೆಗೆ 2010ರಲ್ಲಿ ನಾನೇ ಖುದ್ದು ಶಿಲಾನ್ಯಾಸ ಮಾಡಿದ್ದೇನೆ. ಕಳೆದ ಕೆಲ ವರ್ಷಗಳಿಂದ ಆ ಕಾರ್ಖಾನೆಯಲ್ಲಿ ಸಣ್ಣ ಆಯುಧಗಳನ್ನು ಅಲ್ಲಿ ತಯಾರಿಸಲಾಗುತ್ತಿದೆ' ಎಂದಿದ್ದಾರೆ. 

ಮೋದಿ ವಿರುದ್ಧ ಆರೋಪ ಹೊರಿಸಿಎರಿವ ರಾಹುಲ್ ಗಾಂಧಿ 'ನಿನ್ನೆ ನೀವು ಅಮೇಠಿಗೆ ಭೇಟಿ ನೀಡಿದ್ದಿರಿ. ಇಲ್ಲಿ ಅಭ್ಯಾಸ ಬಲವೆಂಬಂತೆ ಮತ್ತೆ ಸುಳ್ಳು ಹೇಳಿದ್ದೀರಿ. ನಿಮಗೆ ನಾಚಿಕೆ ಎಂಬುವುದೇ ಇಲ್ಲವೇ?' ಎಮದು ಪ್ರಶ್ನಿಸಿದ್ದಾರೆ. ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಅಮೇಠಿಯಲ್ಲಿ ಆಧುನಿಕ ಎಕೆ-203 ರೈಫಲ್ಸ್ ನಿರ್ಮಾಣಕ್ಕೆಂದು ನಿರ್ಮಿಸಲಾದ ಆಯುಧ ಕಾರ್ಖಾನೆಯನ್ನು ಉದ್ಘಾಟಿಸಿದ್ದಾರೆ. 

प्रधानमंत्री जी,

अमेठी की ऑर्डिनेंस फैक्ट्री का शिलान्यास 2010 में मैंने खुद किया था।

पिछले कई सालों से वहां छोटे हथियारों का उत्पादन चल रहा है।

कल आप अमेठी गए और अपनी आदत से मजबूर होकर आपने फिर झूठ बोला।

क्या आपको बिल्कुल भी शर्म नहीं आती?

— Rahul Gandhi (@RahulGandhi)

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮೋದಿ 'ಅವರು ಎಲ್ಲಾ ಕಡೆ ತಿರುಗಾಡುತ್ತಾ ಮೇಡ್ ಇನ್ ಉಜ್ಜೈನ್, ಮೇಡ್ ಇನ್ ಇಂದೋರ್ ಹಾಗೂ ಮೇಡ್ ಇನ್ ಜಯ್ಪುರ ಎಂದು ಹೇಳುತ್ತಾರೆ. ಆದರೆ ಮೇಡ್ ಇನ್ ಅಮೇಠಿಯನ್ನು ಮೋದಿ ನಿಜವಾಗಿಸಿದ್ದಾರೆ' ಎಂದಿದ್ದರು.

ಸದ್ಯ ಮೇಡ್ ಇನ್ ಅಮೇಠಿ ಕಾರ್ಖಾನೆ ಭಾರೀ ಸದ್ದು ಮಾಡುತ್ತಿದ್ದು, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರ ಮಾತಿಗೆ ಆಹಾರವಾಗಿದೆ.

click me!