
ಅಹಮದಾಬಾದ್(ನ.28): 500, 1000 ರೂ. ನೋಟ್ ಬ್ಯಾನ್ ಮಾಡಿದ ಪ್ರಧಾನಿ ಮೋದಿಯ ನಿರ್ಧಾರಕ್ಕೆ ಪರ ವಿರೋಧ ವ್ಯಕ್ತವಾಗಿದೆ. ಕೆಲವರು ಇದು ತಪ್ಪು, ಇಂತಹ ನಿರ್ಧಾರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನೋಟ್ ಬ್ಯಾನ್ ಆದೇಶವನ್ನು ಹಿಂಪಡೆಯಲು ಒತ್ತಾಯ ಮಾಡುತ್ತಿದ್ದರೆ, ಇತರರು ಪ್ರಧಾನಿ ಮೋದಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ, ಕಪ್ಪು ಹಣವನ್ನು ತಡೆಗಟ್ಟಲು ಇದಕ್ಕಿಂತ ಉತ್ತಮ ಕ್ರಮ ಬೇರೊಂದಿಲ್ಲ ಎನ್ನುತ್ತಿದ್ದಾರೆ.
ಈ ನಿರ್ಧಾರ ರಾಜಕೀಯ ಕ್ಷೇತ್ರದಲ್ಲೂ ಭಾರೀ ಸದ್ದು ಮಾಡಿದ್ದು, ಈ ಬಾರಿಯ ಚಳಿಗಾಲದ ಅಧಿವೇಶನವೂ ಇತರ ಚರ್ಚೆಗಳಿಲ್ಲದೆ ನೋಟ್ ಬಿಸಿಗೆ ಬಲಿಯಾಗುತ್ತಿದೆ. ವಿಪಕ್ಷಗಳೆಲ್ಲವೂ ನೋಟ್ ಬ್ಯಾನ್ ನಿರ್ಧಾರವನ್ನು ಹಿಂಪಡೆಯುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಈ ಮಾತಿಗೆ ಬೆಲೆ ನೀಡದಾಗ ವಿಪಕ್ಷಗಳು ನವೆಂಬರ್ 28ರಂದು ಭಾರತ್ ಬಂದ್ ಆಚರಿಸಲು ಕರೆ ನೀಡಿದ್ದು, ಈ ದಿನವನ್ನು 'ಆಕ್ರೋಶ್ ದಿವಸ್' ಎಂದು ಆಚರಿಸಬೇಕೆಂಬ ಮನವಿ ಮಾಡಿಕೊಂಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಮೋದಿ ಬೆಂಬಲಿಗರು ಈ ದಿನವನ್ನು 'ಸಂಭ್ರಮ್ ದಿವಸ್' ಆಗಿ ಆಚರಿಸಲು ಕರೆ ನೀಡಿದೆ.
ಇಂತಹ ಪರಿಸ್ಥಿತಿ ಇದ್ದಾಗ ಅಹಮದಾಬಾದ್'ನ ಕಾಂಗ್ರೆಸ್ ಮುಖಂಡನೊಬ್ಬ ಮೋದಿ ಘೋಷಿಸಿದ ನೋಟ್ ಬ್ಯಾನ್ ನಿರ್ಧಾರವನ್ನು ನಡುಬೀದಿಯಲ್ಲಿ ಠೀಕಿಸಿದ್ದು, ಭಾರತ್ ಬಂದ್'ನ್ನು ಬೆಂಬಲಿಸುವಂತೆ ಅಲ್ಲಿದ್ದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೀಗೇ ಇದ್ದರೆ ಏನೂ ಆಗುತ್ತಿರಲಿಲ್ಲವೇನೋ... ಆದರೆ ಈ ಮುಖಂಡ ನೋಟ್ ಬ್ಯಾನ್ ವಿಚಾರವನ್ನು ಠೀಕಿಸುವ ಭರದಲ್ಲಿ ಮೋದಿಯ ವಿರುದ್ಧ ಮಾತನಾಡಿ, ಬಾಯಿಗೆ ಬಂದಂತೆ ಬೈದಿದ್ದಾರೆ. ಈತನ ವರ್ತನೆಯಿಂದ ಆಕ್ರೋಶಿತರಾದ ಮೋದಿ ಬೆಂಬಲಿಗರು ನಡುರಸ್ತೆಯ್ಲಲೇ ಕಾಂಗ್ರೆಸ್ ಮುಖಂಡನಿಗೆ ಮನಬಂದಂತೆ ಥಳಿಸಿದ್ದಾರೆ. ಆದರೆ ಪೊಲೀಸರು ಆಗಮಿಸುತ್ತಿದ್ದಂತೆ ಪರಿಸ್ಥಿತಿ ತಿಳಿಯಾಗಿದೆ.
ಸದ್ಯ ಕಾಂಗ್ರಸೆ ಮುಖಂಡನಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.