
ರಾಯ್ ಬರೇ (ನ.28): ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮದುವೆಗೆಂದು ಸಿದ್ಧಳಾಗಿ ಕುಳಿತ್ತಿದ್ದ ವಧುವಿನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ 11.30 ಕ್ಕೆ 'ಜೈ ಮಾಲಾ' ಶಾಸ್ತ್ರಕ್ಕಾಗಿ ಮದುಮಗಳು ತಯಾರಾಗಿ ತನ್ನ ಕೊಠಡಿಯಲ್ಲಿ ಕುಳಿತ್ತಿದ್ದಳು. ಈ ವೇಳೆ ಏಕಾಏಕಿ ಆಕೆಯ ಕೋಣೆಗೆ ದೌಡಾಯಿಸಿ ಬಂದ ಮಹಿಳೆಯೊಬ್ಬಳು ವಧುವಿನ ಮುಖಕ್ಕೆ ಆ್ಯಸಿಡ್ ಎರಚಿ ಬಾಗಿಲನ್ನು ಹೊಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾಳೆ.
ವಧುವಿನ ಕಿರುಚಾಟ ಕೇಳಿ ಓಡಿ ಬಂದ ಸಂಬಂಧಿಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ಧೃತಿಗೆಡದ ವರ ಮದುಮಗಳನ್ನು ಮನೆಗೆ ಕರೆತಂದು ಆಕೆಯೊಂದಿಗೆ ಸಕಲ ವಿಧಿ ವಿಧಾನಗಳೊಂದಿಗೆ ಮದುವೆಯಾಗಿದ್ದಾನೆ.
ವಧುವಿನ ಮುಖ ಹಾಗೂ ಕಣ್ಣಿನ ಹೊಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಮದುವೆ ವಿಧಿ ವಿಧಾನಗಳ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಧುವಿಗೆ ಪರಿಚಯವಿದ್ದವರೇ ಈ ಕೃತ್ಯ ಎಸಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.