
ನವದೆಹಲಿ(ಜ.24): ಗಲಭೆ ಹೆಚ್ಚಾಗಿರುವ ಕಾರಣ ರಾಜಸ್ಥಾನ, ಗುಜರಾತ್,ಮಧ್ಯಪ್ರದೇಶ ಹಾಗೂ ಗೋವಾ ರಾಜ್ಯಗಳಲ್ಲಿ ವಿವಾದಿತ ಪದ್ಮಾವತ್ ಚಿತ್ರ ಬಿಡುಗಡೆ ಮಾಡದಿರಲು ಪ್ರಮುಖ ಮಲ್ಟಿಫ್ಲೆಕ್ಸ್'ಗಳು ನಿರ್ಧರಿಸಿವೆ.
ಕಾನೂನು ಸುವ್ಯನಸ್ಥೆಯಿಂದ ಮಾಲ್'ಗಳಲ್ಲಿ ಸಾರ್ವಜನಿಕರ ಸುರಕ್ಷಣೆ ಹಾಗೂ ಆಸ್ತಿ ಪಾಸ್ತಿಯ ರಕ್ಷಣೆಯ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮಾಹಿತಿಯ ಮೇರೆಗೆ ನಾಲ್ಕು ರಾಜ್ಯಗಳಲ್ಲಿ ಚಿತ್ರ ಪ್ರದರ್ಶಿವುದಿಲ್ಲ ಎಂದು ಸಂಘದ ಅಧ್ಯಕ್ಷ ದೀಪಕ್ ಅಶೀರ್ ತಿಳಿಸಿದ್ದಾರೆ.
ಪ್ರಮುಖ ಮಲ್ಟಿಫ್ಲೆಕ್ಸ್'ಗಳು ದೇಶಾದ್ಯಂತ 1800-2000 ಪರದೆಗಳನ್ನು ಹೊಂದಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ 13ನೇ ಶತಮಾನದ ಮೇವರ್'ನ ಮಹಾರಾಜ ರತನ್ ಸಿಂಗ್ ಹಾಗೂ ಅಲ್ಲಾದ್ದೀನ್ ಖಿಲ್ಜಿ ನಡುವೆ ನಡೆದ ಯುದ್ಧಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.