ಪಾದ್ರಿ ಥಾಮಸ್ ಬಿಡುಗಡೆಗೆ ಯಾವುದೇ ಒತ್ತೆ ಹಣ ನೀಡಿಲ್ಲ: ಕೇಂದ್ರದ ಸ್ಪಷ್ಟನೆ

By Suvarna Web DeskFirst Published Sep 13, 2017, 4:43 PM IST
Highlights

ಫಾದ್ರಿಯನ್ನು ಕರೆತರಲು ಸಾಕಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷ ತಂತ್ರಗಳನ್ನು ಬಳಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ

ತಿರುವನಂತಪುರ(ಸೆ.13): ಕಳೆದ ವರ್ಷ ಯೆಮೆನ್‌ನಲ್ಲಿ ಉಗ್ರರ ಒತ್ತೆಯಾಳಾಗಿದ್ದ ಕೇರಳ ಮೂಲದ ಪಾದ್ರಿ ಥಾಮಸ್ ಉಳುನ್ನಲಿಲ್ ಅವರ ಬಿಡುಗಡೆಗಾಗಿ ಯಾವುದೇ ಒತ್ತೆ ಹಣ ನೀಡಲಾಗಿಲ್ಲ.

ಈ ವಿಚಾರದಲ್ಲಿ ವಿದೇಶಾಂಗ ಸಚಿವಾಲಯ ಯಾವುದೇ ಗೊಂದಲ ಮಾಡಿಕೊಳ್ಳದೇ, ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ಫಾದರ್ ಟಾಮ್ ಅವರನ್ನು ಸುರಕ್ಷಿತವಾಗಿ ರಾಷ್ಟ್ರಕ್ಕೆ ಕರೆತರಲು ಸಾಧ್ಯವಾಯಿತು ಎಂದು ಕೇಂದ್ರ ಸರ್ಕಾರ ಹೇಳಿದೆ.

ಫಾದ್ರಿಯನ್ನು ಕರೆತರಲು ಸಾಕಷ್ಟು ಪ್ರತ್ಯಕ್ಷ ಹಾಗೂ ಪರೋಕ್ಷ ತಂತ್ರಗಳನ್ನು ಬಳಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ

ಯೆಮೆನ್ ರಾಷ್ಟ್ರದ ಬಂದರು ನಗರವಾಗಿರುವ ಏಡೆನ್‌'ನಲ್ಲಿ ಕಳೆದ ವರ್ಷ ದಾಳಿ ಎಸಗಿದ ಐಸಿಸ್ ಉಗ್ರರು, ಅಲ್ಲಿಯೇ ವೃದ್ಧಾಶ್ರಮ ನಿರ್ವಹಿಸುತ್ತಿದ್ದ ಥಾಮಸ್‌'ರನ್ನು ಅಪಹರಿಸಿದ್ದರು.

click me!