
ಗದಗ(ಅ.02): ಸಮಾಜದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಕಡಿಮೆ ಎನ್ನುವ ಮಾತಿದೆ. ಆದರೆ ಗದಗ ಜಿಲ್ಲೆ ಹಾಲಕೇರಿಯಲ್ಲಿ ಮಹಿಳೆಯರ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಮಹಿಳೆಯರಿಗಷ್ಟೇ ವಿಶೇಷವಾದ ಪ್ರಾತಿನಿಧ್ಯ ಇರುತ್ತೆ. ಈ ಜಾತ್ರೆಯಲ್ಲಿ ಮಹಿಳೆಯರದ್ದೆ ಮೇಲುಗೈ. ಅದ್ಹೇಗೆ, ಯಾವುದು ಆ ಜಾತ್ರೆ ಅಂತಿರಾ? ಇಲ್ಲಿದೆ ನೋಡಿ ವಿವರ
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೇರಿ ಗ್ರಾಮದಲ್ಲಿ ನಡೆಯುವ ಜಾತ್ರೇಲಿ ಮಹಿಳೆಯರಿಗೇನೆ ಪ್ರಾತಿನಿಧ್ಯ. ಈ ಜಾತ್ರೆಯಲ್ಲಿ ಮಹಿಳೆರದ್ದೇ ಮೇಲುಗೈ. ಮಹಿಳೆಯರೇ ಈ ಜಾತ್ರೆಯ ಕೇಂದ್ರ ಬಿಂದು. ಸಾಮಾನ್ಯವಾಗಿ ಯಾವುದೇ ಜಾತ್ರೆಗಳು ನಡೆದರೆ ಅಲ್ಲಿನ ಬಹುತೇಕ ಜವಬ್ದಾರಿಗಳು ಗಂಡಸರೇ ವಹಸಿಕೊಂಡಿರುತ್ತಾರೆ. ಆದರೆ ಗದಗ ಜಿಲ್ಲೆ ಹಾಲಕೇರಿಯಲ್ಲಿ ಶ್ರೀ ಅನ್ನದಾನೇಶ್ವರ ಮಠದ ಜಾತ್ರೆಯನ್ನ ಮಹಿಳೆಯರು ಮಾಡ್ತಾರೆ.ಇಲ್ಲಿ ಪುರುಷರಿಗೆ ಅವಕಾಶವೇ ಇರುವುದಿಲ್ಲ. ಸುಮಾರು ಒಂದು ವಾರಗಳ ಕಾಲ ನಡಿಯುವ ಈ ಜಾತ್ರೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಇನ್ನೂ ಈ ಜಾತ್ರೇಲಿ ಈ ಬೆಳ್ಳಿ ರಥೋತ್ಸವ ನೆರವೇರುತ್ತದೆ . ಈ ಮಠದ ಬೆಳ್ಳಿರಥವನ್ನು ಪ್ರತಿ ವರ್ಷ ಮಹಿಳೆಯರೇ ಎಳೆದು ಸಂಭ್ರಮಿಸುತ್ತಾರೆ. ಗದಗ ಜಿಲ್ಲೆಯಲ್ಲಿ ನಡೆಯೋ ಈ ಜಾತ್ರೆ ಉತ್ತರ ಕರ್ನಾಟಕದಲ್ಲೇ ವಿಶೇಷ ಅನ್ನಬಹುದು. ಇನ್ನೂ ವಿಶೇಷ ಜಾತ್ರೆಗೆ ಸುತ್ತ ಮುತ್ತಲ ಗ್ರಾಮಗಳಿಂದಲೂ ಜನ ಬಂದು ಸಂಭ್ರಮಿಸಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.