ಕಡಿಮೆ ನೀರಲ್ಲೇ ಭರಪೂರಾ ಬಾಳೆ ಬೆಳೆದ ಮಾದರಿ ರೈತ: ಬಾಳೆ ಕೊಳ್ಳಲು ಮುಂದೆ ಬಂದಿವೆ ವಿದೇಶಿ ಕಂಪನಿಗಳು

Published : Aug 02, 2017, 08:10 AM ISTUpdated : Apr 11, 2018, 01:11 PM IST
ಕಡಿಮೆ ನೀರಲ್ಲೇ ಭರಪೂರಾ ಬಾಳೆ ಬೆಳೆದ ಮಾದರಿ ರೈತ: ಬಾಳೆ ಕೊಳ್ಳಲು ಮುಂದೆ ಬಂದಿವೆ ವಿದೇಶಿ ಕಂಪನಿಗಳು

ಸಾರಾಂಶ

ಬರಗಾಲದಲ್ಲಿ ಏನು ಬೇಸಾಯ ಮಾಡುವುದು . ಇರುವ ಅಲ್ಪ ಸ್ವಲ್ಪ ನೀರಲ್ಲಿ ಹೇಗೆ ಬೆಳೆ ತೆಗೆಯುವುದು ಅಂತಾ ಅನ್ನಿಸುವಂತಿದೆ ಉತ್ತರ ಕರ್ನಾಟಕ ರೈತರ ಪರಿಸ್ಥಿತಿ. ಆದರೆ ಬರಗಾಲದಲ್ಲೂ ಇರುವ ಸ್ವಲ್ಪ ನೀರಿನಲ್ಲೇ ನಾಳೆ ಬೆಳೆದು ರೈತನೊಬ್ಬ ಭರಪೂರಾ ಫಸಲು ತೆಗೆದಿದ್ದಾನೆ.

ಬಾಗಲಕೋಟೆ(ಅ.02): ಬರಗಾಲದಲ್ಲಿ ಏನು ಬೇಸಾಯ ಮಾಡುವುದು . ಇರುವ ಅಲ್ಪ ಸ್ವಲ್ಪ ನೀರಲ್ಲಿ ಹೇಗೆ ಬೆಳೆ ತೆಗೆಯುವುದು ಅಂತಾ ಅನ್ನಿಸುವಂತಿದೆ ಉತ್ತರ ಕರ್ನಾಟಕ ರೈತರ ಪರಿಸ್ಥಿತಿ. ಆದರೆ ಬರಗಾಲದಲ್ಲೂ ಇರುವ ಸ್ವಲ್ಪ ನೀರಿನಲ್ಲೇ ನಾಳೆ ಬೆಳೆದು ರೈತನೊಬ್ಬ ಭರಪೂರಾ ಫಸಲು ತೆಗೆದಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ರೈತ ಸದಾಶಿವ ತೇಲಿಯವರ ತೋಟದಲ್ಲಿ ಎತ್ತ ನೋಡಿದರೂ ಬಾಳೆಗಿಡಗಳು ತೋರಣಗಳಂತೆ ಫಸಲು ತುಂಬಿ ನಿಂತಿವೆ.

ಇದ್ದ ಅಲ್ಪ ಸ್ಪಲ್ಪ ನೀರಿನಲ್ಲೆ 2 ಎಕರೆ ಜಮೀನಿನಲ್ಲಿ ಜಿ-9 ಪ್ರಭೇದದ 2,700 ಬಾಳೆ ಸಸಿ ನೆಟ್ಟು ಇಂದು ಭರಪುರ ಫಲವತ್ತಾದ ಫಸಲು ಬೆಳೆದು ಮಾದರಿ ರೈತನೆನಿಸಿಕೊಂಡಿದ್ದಾನೆ. ನೀರಿನ ಅಭಾವದ ಪರಿಸ್ಥಿತಿಯಲ್ಲೂ ಹನಿ ನೀರಾವರಿ ಮೂಲಕ ಬಾಳೆ ಬೆಳೆ ಬೆಳೆದು ಸುತ್ತ ಮುತ್ತಲಿನ ರೈತರಿಗೆ ಮಾದರಿ ಅನ್ನಿಸುವಂತೆ  ಫಸಲು ಪಡೆದಿದ್ದಾರೆ.

ಸದಾಶಿವ ತೇಲಿ ಅವರು ಬೆಳೆದ ಬಾಳೆ ಬೆಳೆಯನ್ನ ನೋಡಲು ಸುತ್ತಮುತ್ತಲಿನ ಗ್ರಾಮಗಳ ರೈತರು ಬರುತ್ತಿದ್ದಾರೆ. ಈ ಮಧ್ಯೆ ಸ್ಥಳೀಯ ಶಾಸಕ ಗೋವಿಂದ ಕಾರಜೋಳ ಸಹ ಹೊಲಕ್ಕೆ ಭೇಟಿ ನೀಡಿದ್ದು, ರೈತನ ಸಾಧನೆಯನ್ನ ಅಭಿಮಾನದ ಮೂಲಕ ಕೊಂಡಾಡಿದ್ರು.

ಒಟ್ನಲ್ಲಿ,  ಬರಗಾಲ ಅಂತ ಸಾಲ ಸೋಲ ಮಾಡಿ ಕಂಗೆಡುವ  ರೈತರ ಮಧ್ಯೆ ಇದ್ದಷ್ಟು ನೀರಿನಲ್ಲಿಯೇ 2 ಎಕರೆ ಪ್ರದೇಶದಲ್ಲಿ ಭರಪೂರ ಬಾಳೆ ಬೆಳೆದು ಇತರ ರೈತರಿಗೆ ಇವರು ಮಾದರಿಯಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್
Oil Scam: 1996ರ ಕ್ರಿಕೆಟ್‌ ವಿಶ್ವಕಪ್‌ ವಿಜೇತ ನಾಯಕ ಅರ್ಜುನ್‌ ರಣತುಂಗಾ ಬಂಧನ?