ಬಿಜೆಪಿಯಿಂದ ಮಠವನ್ನು ವಶಕ್ಕೆ ಪಡೆಯುವ ವದಂತಿ

By Suvarna Web DeskFirst Published Nov 2, 2017, 5:03 PM IST
Highlights

ರಾಜ್ಯದ ದೇಗುಲಗಳಲ್ಲಿ ಡ್ರೆಸ್‌ಕೋಡ್ ಇಲ್ಲ: ಸಚಿವ

ಹಾವೇರಿ: ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಇಂಥದ್ದೇ ವಸ್ತ್ರ ಧರಿಸಿ ದೇವಸ್ಥಾನಕ್ಕೆ ಬರುವಂತೆ ಕಡ್ಡಾಯಗೊಳಿಸುತ್ತಿಲ್ಲ ಎಂದು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನಗಳಲ್ಲಿ ಕಡ್ಡಾಯ ವಾಗಿ ಡ್ರೆಸ್ ಕೋಡ್ ಜಾರಿಗೊಳಿಸುವಷ್ಟು ಶ್ರೀಮಂತ ದೇಶ ನಮ್ಮದಲ್ಲ. ಸವದತ್ತಿ ಯಲ್ಲಮ್ಮ ದೇವಸ್ಥಾನ ಸೇರಿ ಅನೇಕ ಕಡೆ ಬಡ ಭಕ್ತರೇ ಹೆಚ್ಚಾಗಿ ಬರುತ್ತಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಅವರಿಗೆಲ್ಲ ಕಡ್ಡಾಯವಾಗಿ ಡ್ರೆಸ್‌ಕೋಡ್ ಜಾರಿಗೊಳಿಸಿದರೆ ತೊಂದರೆಯಾಗುತ್ತದೆ.

ಹಾಗಾಗಿ, ಹಿಂದೂ ಸಂಸ್ಕೃತಿ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಸಭ್ಯ ರೀತಿಯ ವಸ್ತ್ರವನ್ನು ಧರಿಸಬೇಕು ಎಂಬ ಸುತ್ತೋಲೆಯನ್ನು ಈಗಾಗಲೇ ಹೊರಡಿಸಲಾಗಿದೆ ಎಂದರು.

ಯಾವ ಮಠವನ್ನೂ ವಶಕ್ಕೆ ಪಡೆಯಲ್ಲ, ಬಿಜೆಪಿಯಿಂದ ಇಂಥ ವದಂತಿ:

ಮಠ, ದೇವಸ್ಥಾನಗಳನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುತ್ತಿದೆ ಎಂಬ ಸೋಂದಾ ಸ್ವರ್ಣವಲ್ಲಿ ಶ್ರೀಗಳ ಆರೋಪ ಸತ್ಯಕ್ಕೆ ದೂರವಾಗಿದ್ದು, ಯಾವ ಮಠಗಳನ್ನೂ ಸರ್ಕಾರ ವಶಕ್ಕೆ ತೆಗೆದುಕೊಳ್ಳು ವುದಿಲ್ಲ ಎಂದು  ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಾಣಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸೋಂದಾ ಶ್ರೀಗಳಿಗೆ ಯಾರಾದರೂ ಮಠವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಹೆದರಿಸಿದ್ದರೆ ಶ್ರೀಗಳು ಕೂಡಲೇ ನನ್ನನ್ನು ಸಂಪರ್ಕಿಸಲಿ. ಅವರ ಸಮಸ್ಯೆ ಸರಿಪಡಿಸುತ್ತೇನೆ. ಈ ಕುರಿತು ಶ್ರೀಗಳೊಂದಿಗೆ ಮಾತನಾ ಡುತ್ತೇನೆ ಎಂದು ಹೇಳಿದರು

click me!