
ನವದೆಹಲಿ(ಜು.31): ಮಹಾಘಟಬಂಧನ ತೊರೆದು ಎನ್ ಡಿಎ ಪಾಳೆಯಕ್ಕೆ ಜಿಗಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆಂದು ಹೇಳ ಲಾಗಿರುವ ಜೆಡಿಯು ನಾಯಕ ಶರದ್ ಯಾದವ್ ಮುಂದಿನ ಹೆಜ್ಜೆ ಕುರಿತು ಅಳೆದೂ ತೂಗಿ ನೋಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ನಿತೀಶ್ ನಡೆಸಿದ ಕ್ಷಿಪ್ರಕ್ರಾಂತಿ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಶರದ್ ಮಾತುಕತೆ ನಡೆಸಿದ್ದರು. ಇದಾದ ತರುವಾಯ ಸಿಪಿಎಂ ಪ್ರಧಾನ ಕಾರ್ಯ ದರ್ಶಿ ಸೀತಾರಾಮ ಯೆಚೂರಿ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಜತೆಗೂ ಚರ್ಚೆ ನಡೆಸಿದ್ದಾರೆ. ಜೆಡಿಯು ಈಗ ಎನ್‌ಡಿಎ ಪಾಳೆಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ಸ್ಥಾನದ ಆರ್ ಬಂದಿದೆಯಾದರೂ ಅದನ್ನು ಯಾದವ್ ಒಪ್ಪಿಲ್ಲ ಎನ್ನಲಾಗಿದೆ
'ಲಾಲು ನನ್ನನ್ನು ಕ್ಷ ಮಿಸಿಬಿಡಿ' ರಾಜೀನಾಮೆಗೆ ಮುನ್ನ ನಿತೀಶ್ ಪಟನಾ:
ಆರ್‌ಜೆಡಿ- ಕಾಂಗ್ರೆಸ್ ಜತೆಗಿನ ಮೈತ್ರಿ ಯನ್ನು ಕಡಿದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದರು. ‘ಲಾಲೂ ಜೀ ಮಹಾ ಘಟಬಂ‘ನವನ್ನು ಮುರಿದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ ಬಿಡಿ, 20 ತಿಂಗಳು ಸರ್ಕಾರ ನಡೆಸಿದ ಬಳಿಕ ಇದನ್ನು ಮುಂದುವರೆಸಿಕೊಂಡು ಹೋಗುವುದು ನನ್ನಿಂದ ಆಗದು’ ಎಂದು ಕೋರಿಕೊಂಡಿದ್ದರು. ಈ ವೇಳೆ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಲಾಲು ನಿತೀಶ್‌ರನ್ನು ಕೋರಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.