
ಮೈಸೂರು(ಜುಲೈ 31): ಪೊಲೀಸ್ ಯೂನಿಫಾರ್ಮ್ ಹಾಕಿಕೊಂಡು ಜನರನ್ನು ಯಾಮಾರಿಸುತ್ತಿದ್ದ ಶಿವಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಪೊಲೀಸ್ ಗೆಟಪ್ ಕಂಡ ಸಾಕಷ್ಟು ಮಂದಿ ಈತನಿಂದ ಮೋಸ ಹೋಗಿದ್ದಾರೆನ್ನಲಾಗಿದೆ. ಈತ ಸಿಕ್ಕಿಬೀಳದೇ ಇದ್ದಿದ್ದರೆ ಬಹುಶಃ ಮುಂದಿನ ಬಿಗ್ ಬಾಸ್ ಸೀಸನ್'ನಲ್ಲಿ ಈತನನ್ನು ಒಬ್ಬ ಕಂಟೆಸ್ಟೆಂಟ್ ಆಗಿ ನೋಡುವ ಸಾಧ್ಯತೆಯೂ ಇತ್ತು. ಯಾಕೆಂದರೆ ಈತ ಬಿಗ್'ಬಾಸ್'ಗೆ ಎಂಟ್ರಿ ಕೊಡಲು ಸಾಕಷ್ಟು ಕಸರತ್ತು ನಡೆಸಿದ್ದ. ಅದಕ್ಕಾಗೇ ತಾನು ಥರಹಾವೇರಿ ಮಾತನಾಡಿರುವುದನ್ನು ವಿಡಿಯೋದಲ್ಲಿ ಶೂಟ್ ಮಾಡಿಸಿಕೊಂಡಿದ್ದ. ತಾನು 3 ಕೋಟಿ ಸಾಲ ಮಾಡಿ ಊರಿಂದೂರು ಅಲೆಯುತ್ತಿರುವುದನ್ನು ಈತ ಬಾಯಿಬಿಟ್ಟಿದ್ದಾನೆ. ತನ್ನನ್ನು ವಿಜಯ್ ಮಲ್ಯಗೆ ಹೋಲಿಕೆ ಮಾಡಿಕೊಳ್ಳುತ್ತಾನೆ. ವಿಜಯ್ ಮಲ್ಯ ಸಾವಿರಾರು ಕೋಟಿ ರೂ ಸಾಲ ಮಾಡಿ ದೇಶ ಬಿಟ್ಟು ಹೋಗಿದ್ಧಾನೆ. ತಾನು 3 ಕೋಟಿ ಸಾಲ ಮಾಡಿ ಊರು ಬಿಟ್ಟು ಊರು ಅಲೆಯುತ್ತಿದ್ದೇನೆ ಎಂದು ಎದೆಯುಬ್ಬಿಸಿ ಹೇಳಿದ್ದಾನೆ. ತನ್ನಂಥ ಸಾಮಾನ್ಯ ಮನುಷ್ಯನಿಗೆ ಬಿಗ್ ಬಾಸ್'ನಲ್ಲಿ ಎಂಟ್ರಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಬಿಗ್ ಬಾಸ್ ಎಂದೂ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.