ಮಳೆ ಬಂದರೂ ಬಿತ್ತನೆ ಯಾಕೆ ಮಾಡಿಲ್ಲ ಎಂದು ರೈತರಿಗೆ ನೋಟಿಸ್ ನೀಡಿದ ಡಿಸಿ

Published : May 27, 2017, 08:51 PM ISTUpdated : Apr 11, 2018, 01:02 PM IST
ಮಳೆ ಬಂದರೂ ಬಿತ್ತನೆ ಯಾಕೆ ಮಾಡಿಲ್ಲ ಎಂದು ರೈತರಿಗೆ ನೋಟಿಸ್ ನೀಡಿದ ಡಿಸಿ

ಸಾರಾಂಶ

ಜಿಲ್ಲೆಯಲ್ಲಿ ಪ್ರಸ್ತುತ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳುತ್ತಿದ್ದರೂ ಬಿತ್ತನೆ ಕಾರ್ಯ ಚುರುಕಾಗಿಲ್ಲ . ಜತೆಗೆ ಉಳುಮೆ ಮಾಡದೇ ಬೀಳು ಬಿಡೋದು ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ವಿರುದ್ಧ ಅನ್ನೋದು ಜಿಲ್ಲಾಧಿಕಾರಿಗಳ ವಾದ. ಹೀಗಾಗಿ ಬಿತ್ತನೆ ಮಾಡದ ರೈತರುಗಳ ವಿರುದ್ದ ಭೂಸುಧಾರಣಾ ಕಾಯ್ದೆ 1961ರ ಸೆಕ್ಷನ್ 84ರ ರೀತ್ಯಾ ನೋಟೀಸ್ ನೀಡಿ  ಕ್ರಮ ಕೈಗೊಳ್ಳೋದಾಗಿ ಪ್ರಕಟಣೆ ಹೊರಡಿಸಿದ್ದಾರೆ.

ಚಾಮರಾಜ ನಗರ(ಮೇ.20): ಹಿಂಗಾರು, ಮುಂಗಾರು, ಋತುಮಾನ ಆಧರಿಸಿ ರೈತರು ಬೆಳೆ ಬೆಳೆಯೋದು ರೂಢಿಗತ. ಆದರೆ ಚಾಮರಾಜನಗರದ ಡಿಸಿ ಒಂದು ಹೆಜ್ಜೆ ಮುಂದೆ ಹೋಗಿ ಮಳೆ ಬಂದರೂ ಬಿತ್ತನೆ ಯಾಕೆ ಮಾಡ್ತಿಲ್ಲ ಅಂತಾ ರೈತರಿಗೇ ವಿವಾದಾತ್ಮಕ ನೋಟೀಸ್​ ಜಾರಿ ಮಾಡಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರ ಪ್ರಮುಖವಾಗಿ ಕೃಷಿ ಆಧರಿತ ಭೂಪ್ರದೇಶ. ಅನಾದಿಕಾಲದಿಂದಲೂ ರೈತರು ಋತುಮಾನವನ್ನ ಆಧರಿಸಿ ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗ್ತಿದೆ. ಇಷ್ಟಾದ್ರೂ ಕೃಷಿ ಚಟುವಟಿಕೆಗಳು ಗರಿಗೆದರಿಲ್ಲ, ಮಳೆ ಬಂದರೂ ಬಿತ್ತನೆ ಮಾಡ್ತಿಲ್ಲ ಅಂತಾ ಜಿಲ್ಲಾಧಿಕಾರಿ ಬಿ. ರಾಮು ವಿವಾದಾತ್ಮಕ ನೋಟೀಸ್​ ಜಾರಿ ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರೈತರ ಆಕ್ರೋಶ

ಬಿತ್ತನೆ ಮಾಡದ ರೈತರ ವಿರುದ್ದ ಕರ್ನಾಟಕ ಭೂಸುಧಾರಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವಿವಾದಾತ್ಮಕ ಆದೇಶ ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರೋ ರೈತ ಮುಖಂಡರು ಜಿಲ್ಲಾಧಿಕಾರಿಗಳಿಂದ ಹೇಳಿಸಿಕೊಂಡು ಬಿತ್ತನೆ ಮಾಡುವಂತಹ ಅಗತ್ಯತೆ ನಮಗಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳುತ್ತಿದ್ದರೂ ಬಿತ್ತನೆ ಕಾರ್ಯ ಚುರುಕಾಗಿಲ್ಲ . ಜತೆಗೆ ಉಳುಮೆ ಮಾಡದೇ ಬೀಳು ಬಿಡೋದು ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ವಿರುದ್ಧ ಅನ್ನೋದು ಜಿಲ್ಲಾಧಿಕಾರಿಗಳ ವಾದ. ಹೀಗಾಗಿ ಬಿತ್ತನೆ ಮಾಡದ ರೈತರುಗಳ ವಿರುದ್ದ ಭೂಸುಧಾರಣಾ ಕಾಯ್ದೆ 1961ರ ಸೆಕ್ಷನ್ 84ರ ರೀತ್ಯಾ ನೋಟೀಸ್ ನೀಡಿ  ಕ್ರಮ ಕೈಗೊಳ್ಳೋದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಇದೇ ವಿಚಾರವಾಗಿ ಕೃಷಿ ಇಲಾಖೆ ಕರೆದಿದ್ದ  ಸಭೆಯನ್ನ ರೈತ ಮುಖಂಡರು ಬಹಿಷ್ಕರಿಸಿ ಹೊರನಡೆದಿದ್ದಾರೆ. ಒಟ್ಟಿನಲ್ಲಿ,  ನೊಂದು ಬೆಂದಿರೊ ರೈತರ ಮೇಲೆ ಜಿಲ್ಲಾಧಿಕಾರಿ ಕಾನೂನಿನ ಅಸ್ತ್ರ ಪ್ರಯೋಗಿಸ್ತಿರೋದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ವರದಿ: ಶಶಿಧರ ಕೆ.ವಿ. ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ನಾಯಕರ ಕುಟುಂಬಕ್ಕೆ ಸಂಕಷ್ಟ: ಏನಿದು ಕೇಸ್?
ದೇಶದಲ್ಲಿ ಬಂಗಾರ, ಬೆಳ್ಳಿ ದಾಖಲೆ : ಬೆಲೆ ಏರಿಕೆ ಪರ್ವದ ಹಿಂದಿನ ರಹಸ್ಯ ಏನು?