ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಪೀಕರ್ ಹುದ್ದೆ ಯಾರಿಗೆ?

By Web DeskFirst Published May 7, 2019, 3:56 PM IST
Highlights

5 ವರ್ಷ ಸ್ಪೀಕರ್‌ ಆಗಿ ಸುಗಮವಾಗಿ ಕಲಾಪ ನಡೆಸಿದ್ದ ಸುಮಿತ್ರಾ ಮಹಾಜನ್‌ ಅವರಿಗೆ ಈ ಬಾರಿ ಟಿಕೆಟ್‌ ನೀಡದೆ ಮನೆಯಲ್ಲಿ ಕೂರಿಸಲಾಗಿದೆ. ಹೀಗಿರುವಾಗ ಒಂದು ವೇಳೆ ಬಿಜೆಪಿ ಅಥವಾ ಬಿಜೆಪಿ ಮಿತ್ರರು ಸೇರಿ ಅಧಿಕಾರಕ್ಕೆ ಬಂದರೆ ಸ್ಪೀಕರ್‌ ಯಾರಾಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

5 ವರ್ಷ ಸ್ಪೀಕರ್‌ ಆಗಿ ಸುಗಮವಾಗಿ ಕಲಾಪ ನಡೆಸಿದ್ದ ಸುಮಿತ್ರಾ ಮಹಾಜನ್‌ ಅವರಿಗೆ ಈ ಬಾರಿ ಟಿಕೆಟ್‌ ನೀಡದೆ ಮನೆಯಲ್ಲಿ ಕೂರಿಸಲಾಗಿದೆ. 

ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?

ಹೀಗಿರುವಾಗ ಒಂದು ವೇಳೆ ಬಿಜೆಪಿ ಅಥವಾ ಬಿಜೆಪಿ ಮಿತ್ರರು ಸೇರಿ ಅಧಿಕಾರಕ್ಕೆ ಬಂದರೆ ಸ್ಪೀಕರ್‌ ಯಾರಾಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಕೆಲವರು ನಿತಿನ್‌ ಗಡ್ಕರಿ ಹೆಸರು ಹೇಳುತ್ತಿದ್ದು, ಹೇಗೂ ಮೋದಿ ಮತ್ತು ಗಡ್ಕರಿ ನಡುವೆ ಸಂಬಂಧಗಳು ಕಿತ್ತುಹೋಗಿವೆ. 

ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗ್ತಾರಾ ಶೋಭಾ ಕರಂದ್ಲಾಜೆ?

ಎಲ್ಲ ಪಕ್ಷಗಳ ಜೊತೆ ಗಡ್ಕರಿ ಅವರ ಸಂಬಂಧ ಚೆನ್ನಾಗಿದೆ. ಹಾಗಾಗಿ ಅವರೇ ಆಗಬೇಕು ಎಂದು ಮೋದಿ ಹೇಳಿದರೂ ಆಶ್ಚರ್ಯ ಇಲ್ಲ. ಆದರೆ ಗಡ್ಕರಿ ಅವರಿಗೆ ಸರಸಂಘ ಚಾಲಕ ಭಾಗವತ್‌ ಅವರ ರಕ್ಷಣೆ ಇದೆ. ಯಾರೇ ಆಗಲಿ ಚರ್ಚೆಗಳಂತೂ ಜೋರಾಗಿ ನಡೆಯುತ್ತಿವೆ. ದಿಲ್ಲಿ ಎಂದ ಮೇಲೆ ಪಾಲಿಟಿಕ್ಸ್‌ ಚರ್ಚೆಗೆ ಬರವೇ?

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’  ಕ್ಲಿಕ್ ಮಾಡಿ 

click me!