6 ಸಾವಿರ ಅಡಿ ಎತ್ತರಕ್ಕೆ ಹೊಗೆಯುಗುಳುತ್ತಿದೆ ಜ್ವಾಲಾಮುಖಿ ಬೆಟ್ಟ!

By Web DeskFirst Published May 7, 2019, 2:52 PM IST
Highlights

ಭಾರೀ ಪ್ರಮಾಣದಲ್ಲಿ ಹೊಗೆಯುಗುಳುತ್ತಿರುವ ಜ್ವಾಲಾಮುಖಿ ಬೆಟ್ಟ| ಸುರಕ್ಷಿತ ಸ್ಥಳಗಳತ್ತ ಸುತ್ತಮುತ್ತಲಿನ ಗ್ರಾಮಸ್ಥರು| ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಸಮೀಪ ಇರುವ ಮೌಂಟ್ ಸಿನಾಬಂಗ್| 6 ಸಾವಿರ ಅಡಿ ಎತ್ತರಕ್ಕೆ ಹೊಗೆಯುಗುಳುತ್ತಿದೆ ಮೌಂಟ್ ಸಿನಾಬಂಗ್|

ಜಕಾರ್ತಾ(ಮೇ.07): ಇಂಡೋನೇಷ್ಯಾದಲ್ಲಿ ಜೀವಂತ ಜ್ವಾಲಾಮುಖಿ ಬೆಟ್ಟವೊಂದು ಭಾರೀ ಪ್ರಮಾಣದಲ್ಲಿ ಹೊಗೆಯುಳುತ್ತಿದ್ದು, ಧೂಳು ಮತ್ತು ಹೊಗೆ ಸುಮಾರು 6 ಸಾವಿರ ಅಡಿ ಮೇಲಕ್ಕೆ ಚಿಮ್ಮುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಸುಮಾತ್ರಾ ದ್ವೀಪದ ಸಮೀಪ  ಇರುವ ಮೌಂಟ್ ಸಿನಾಬಂಗ್ ಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಕಂಡು ಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ 2010ರಲ್ಲಿ ಬರೋಬ್ಬರಿ 400 ವರ್ಷಗಳ ನಂತರ ಜ್ವಾಲಾಮುಖಿ ಹೊರಹಾಕಿದ್ದ ಮೌಂಟ್ ಸಿನಾಬಗ್, ಇದೀಗ ಮತ್ತೆ ಜ್ವಾಲಾಮುಖಿ ಉಗುಳುವ ಸಂಭವನೀಯತೆ ಹೆಚ್ಚಿದೆ.

click me!