ಸಿಂಹಗಳ ಗತ್ತು, ಗೈರತ್ತು: ಈ ವಿಡಿಯೋ ನೋಡಿ ಇದ್ರೆ ಪುರುಸೋತ್ತು!

Published : Jan 11, 2019, 07:05 PM IST
ಸಿಂಹಗಳ ಗತ್ತು, ಗೈರತ್ತು: ಈ ವಿಡಿಯೋ ನೋಡಿ ಇದ್ರೆ ಪುರುಸೋತ್ತು!

ಸಾರಾಂಶ

ಅಬ್ಬಾ! ಸಿಂಹಗಳು ರಸ್ತೆಗಿಳಿದರೆ ಏನಾಗತ್ತೆ ನೋಡಿ| ಕಾಡಿನ ರಾಜ ಬಂದ್ರೆ ದಾರಿ ಬಿಡದಿರಲು ಸಾಧ್ಯವೇ?| ಸಿಂಹಗಳ ರಾಜ ನಡಿಗೆಗೆ ಇಡೀ ರಸ್ತೆ ಬ್ಲಾಕ್| ಹಲವು ಕಿ.ಮೀ.ಗಳ ವರೆಗೆ ಟ್ರಾಫಿಕ್ ಜಾಮ್| ದ.ಆಫ್ರಿಕಾದ ಕ್ರಗೇರ್ ನ್ಯಾಶನಲ್ ಪಾರ್ಕ್

ಕೇಪ್‌ಟೌನ್(ಜ.11): ಸಿಂಹಗಳನ್ನು ಸುಮ್ಮ ಸುಮ್ಮನೆ ಕಾಡಿನ ರಾಜ ಅಂತಾ ಕರೆಯಲ್ಲ. ಅವುಗಳ ಗತ್ತು, ಗೈರತ್ತು ಕಂಡ ಎಂತ ಗಂಡೆದೆ ವೀರರೂ ಒಮ್ಮೆ ತಲೆಬಾಗಿ ಬಿಡುತ್ತಾರೆ.

ಇದಕ್ಕೆ ಪುಷ್ಠಿ ಬೇಕಾದರೆ ನೀವು ವಿಡಿಯೋ ನೋಡಲೇಬೇಕು. ಇದು ದಕ್ಷಿಣ ಆಫ್ರಿಕಾದ ಕ್ರಗೇರ್ ನ್ಯಾಶನಲ್ ಪಾರ್ಕ್‌ನಲ್ಲಿ ನಡೆ ಘಟನೆ. ಒಟ್ಟು ನಾಲ್ಕು ಸಿಂಹಗಳು ಹೆದ್ದಾರಿಯಲ್ಲಿ ರಾಜಾರೋಷವಾಗಿ ಓಡಾಡುತ್ತಾ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕ್ರಗೇರ್ ನ್ಯಾಶನಲ್ ಪಾರ್ಕ್‌ನ ಹೆದ್ದಾರಿ ಬಳಿ ಏಕಾಏಕಿ ಕಾಣಿಸಿಕೊಂಡ ನಾಲ್ಕು ಸಿಂಹಗಳು ಇಡೀ ರಸ್ತೆಯನ್ನು ಬ್ಲಾಕ್ ಮಾಡಿದ್ದಲ್ಲದೇ, ರಾಜಾರೋಷವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿರುವ ವಿಡಿಯೋ ಇದಾಗಿದೆ.

ಸಿಂಹಗಳ ರಾಜ ನಡಿಗೆ ಪರಿಣಾಮ ಇಡೀ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದವು. ಹಲವು ಕಿ.ಮೀ.ಗಳ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ನಿಂತಲ್ಲೇ ನಿಂತಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ