ನಾನು ಸತ್ತಿಲ್ಲ ಎಂದು ಟಿವಿ ಮುಂದೆ ಬಂದ ಅಧ್ಯಕ್ಷ

Published : Dec 04, 2018, 12:34 PM IST
ನಾನು ಸತ್ತಿಲ್ಲ ಎಂದು ಟಿವಿ ಮುಂದೆ ಬಂದ ಅಧ್ಯಕ್ಷ

ಸಾರಾಂಶ

ನೈಜೀರಿಯಾ ಅಧ್ಯಕ್ಷ ಸಾವು, ಪ್ರತಿರೂಪಿ ವ್ಯಕ್ತಿ ದರ್ಶನ! ದೇಶದ ಅಧ್ಯಕ್ಷರೇ, ಟೀವಿ ಮುಂದೆ ಬಂದು, ಇಲ್ಲ ನಾನು ಸತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

ನೈಜಿರಿಯಾ (ಡಿ. 04): ವಯೋವೃದ್ಧರಾಗಿರುವ ಖ್ಯಾತನಾಮರು ಸಾವನ್ನಪ್ಪಿದ್ದಾರೆ ಎಂದು ಆಗಾಗ್ಗೆ ಅಲ್ಲಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ನೈಜೀರಿಯಾದಲ್ಲಿ ಈ ವಿಷಯ ಹಂತ ತಲುಪಿದೆ ಎಂದರೆ, ಸತ್ತು ಹೋಗಿದ್ದಾರೆ ಎಂದು ಹೇಳಲಾದ ದೇಶದ ಅಧ್ಯಕ್ಷರೇ, ಟೀವಿ ಮುಂದೆ ಬಂದು, ಇಲ್ಲ ನಾನು ಸತ್ತಿಲ್ಲ ಎಂದು ಸ್ಪಷ್ಟನೆ ನೀಡಬೇಕಾಗಿ ಬಂದಿದೆ.

ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಮ್ಮದ್‌ ಬುಹಾರಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಬಹಳ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಧ್ಯಕ್ಷರು ಸಾವಿಗೀಡಾಗಿದ್ದಾರೆ. ಅವರಂತೆಯೇ ಕಾಣುವ ಇನ್ನೊಬ್ಬ ವ್ಯಕ್ತಿಯನ್ನು ತೋರಿಸಲಾಗುತ್ತಿದೆ ಎಂಬ ಗಾಳಿ ಸುದ್ದಿ ನೈಜೀರಿಯಾದೆಲ್ಲೆಡೆ ಹಬ್ಬಿತ್ತು. ಹೀಗಾಗಿ ಸೋಮವಾರ ಟೀವಿ ಮುಂದೆ ಬುಹಾರಿ ತಾವಿನ್ನು ಬದುಕಿರುವುದನ್ನು ಖಚಿತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು