ರಾಜಕೀಯ ಪಕ್ಷಗಳಿಗೆ ನೀಡುವ ನಗದಿಗೆ ಲಿಮಿಟ್

By Suvarna Web DeskFirst Published Jan 24, 2018, 8:23 AM IST
Highlights

ದೇಶದ ರಾಜಕೀಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ, ಯಾವುದೇ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷಕ್ಕೆ 2000 ರು.ಗಿಂತ ಹೆಚ್ಚಿನ ಹಣ ನಗದು ರೂಪದಲ್ಲಿ ನೀಡದಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ನವದೆಹಲಿ: ದೇಶದ ರಾಜಕೀಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ, ಯಾವುದೇ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷಕ್ಕೆ 2000 ರು.ಗಿಂತ ಹೆಚ್ಚಿನ ಹಣ ನಗದು ರೂಪದಲ್ಲಿ ನೀಡದಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ.

ಅಲ್ಲದೆ, ದಿನವೊಂದಕ್ಕೆ ವ್ಯಕ್ತಿ ಯಿಂದ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ಪಡೆದುಕೊಳ್ಳಬೇಡಿ. 20000 ಕ್ಕೂ ಹೆಚ್ಚಿನ ನಗದು ಪಡೆಯಲೂಬಾರದು, ಪಾವತಿಸಲೂಬಾರದು. ಉದ್ಯಮಿ ಅಥವಾ ವೃತ್ತಿಗಾರ ನೋರ್ವ 10000 ಗೆ ಮೇಲ್ಪಟ್ಟ ವ್ಯವಹಾರವನ್ನು ನಗದುರಹಿತವಾಗಿಯೇ ಮಾಡಲು ಸೂಚಿಸಿದೆ.

click me!