ಚಿಕ್ಕಮಗಳೂರಿನಲ್ಲೂ ಸಿಕ್ತು ದಾಖಲೆಯಿಲ್ಲದ ಲಕ್ಷ ಲಕ್ಷ ಹೊಸ ನೋಟು

Published : Dec 02, 2016, 12:17 PM ISTUpdated : Apr 11, 2018, 01:10 PM IST
ಚಿಕ್ಕಮಗಳೂರಿನಲ್ಲೂ ಸಿಕ್ತು ದಾಖಲೆಯಿಲ್ಲದ ಲಕ್ಷ ಲಕ್ಷ ಹೊಸ ನೋಟು

ಸಾರಾಂಶ

ಚಿಕ್ಕರಾಯಪ್ಪ,ಜಯಚಂದ್ರ ಮಂಗಳೂರಿನಲ್ಲಿ ಪತ್ತೆಯಾದ ನಂತರ  ಚಿಕ್ಕಮಗಳೂರಿನಲ್ಲೂ ಹೊಸ ನೋಟುಗಳು ಪತ್ತೆಯಾಗಿದೆ.

ಸಾಮಾನ್ಯರು ಕೆಲವು ಸಾವಿರಗಳಿಗೆ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲೂ ನಿಂತಿರೂ ಹಣ ಸಿಗುತ್ತಿಲ್ಲ ಆದರೆ ಅಧಿಕಾರಿಗಳಿಗೆ ಕಾಳಧನಿಕರಿಗೆ ಸುಲಭವಾಗಿ ಕೋಟಿ,ಕೋಟಿ ಲಕ್ಷ ಲಕ್ಷ ಹಣ ಸಿಗುತ್ತದೆ.

ಚಿಕ್ಕರಾಯಪ್ಪ,ಜಯಚಂದ್ರ ಮಂಗಳೂರಿನಲ್ಲಿ ಪತ್ತೆಯಾದ ನಂತರ  ಚಿಕ್ಕಮಗಳೂರಿನಲ್ಲೂ ಹೊಸ ನೋಟುಗಳು ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದೇ ಇರುವ ನೂತನ 2000 ರೂ. ಮುಖಬೆಲೆಯ 46 ಲಕ್ಷ ರೂ. ಗಳನ್ನು ಚಿಕ್ಕಮಗಳೂರು ಜಿಲ್ಲಾ ಅಪರಾಧ ವಿಭಾಗದ ತಂಡದ ಸದಸ್ಯರು ವಶಕ್ಕೆ ತೆಗೆದುಕೊಂಡಿದ್ಧಾರೆ.

ಚಿಕ್ಕಮಗಳೂರು ನಗರದ ಜಯನಗರ ಬಡಾವಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳಾದ ಕುಮಾರ್ ಮತ್ತು ಕಿರಣ್ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹಾಸನದಿಂದ ಚಿಕ್ಕಮಗಳೂರು ಕಾರಿ ಆಗಮಿಸುವ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ‘ಇಯರ್‌ರಿಂಗ್‌’ ಸೃಷ್ಟಿಸಿದ ಕುತೂಹಲ!
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ