ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಪುಟ್ಟ ರಾಷ್ಟ್ರ ನೇಪಾಳ| ಭಾರತದ ಹೊಸ ರಾಜಕೀಯ ನಕ್ಷೆಗೆ ನೇಫಾಳ ವಿರೋಧ| ಭಾರತ ಗುರುತಿಸಿರುವ ಕಾಲಾಪಾನಿ ಪ್ರದೇಶ ನಮ್ಮದು ಎಂದ ನೇಪಾಳ| ಭಾರತದ ಹೊಸ ರಾಜಕೀಯ ನಕ್ಷೆ ಒಪ್ಪಲು ಸಾಧ್ಯವಿಲ್ಲ ಎಂದ ನೇಪಾಳ| 'ಭಾರತ ಕಾಲಾಪಾನಿ ಪ್ರದೇಶವನ್ನು ಅಕ್ರಮವಾಗಿ ತನ್ನದೆಂದು ಗುರುತಿಸಿದೆ'| ನೇಪಾಳ ವಿದೇಶಾಂಗ ಸಚಿವಾಲಯದ ಗಂಭೀರ ಆರೋಪ|
ಕಠ್ಮಂಡು(ನ.07): ಭಾರತ ಹೊಸ ರಾಜಕೀಯ ನಕ್ಷೆ ನೋಡಿ ಪಕ್ಕದ ಪುಟ್ಟ ರಾಷ್ಟ್ರ ನೇಪಾಳ ಮುನಿಸಿಕೊಂಡಿದೆ. ಭಾರತ ಗುರುತಿಸಿರುವ ಕಾಲಾಪಾನಿ ಪ್ರದೇಶ ತನಗೆ ಸೇರಿದ್ದು ಎಂದು ನೇಪಾಳ ಕ್ಯಾತೆ ತೆಗೆದಿದೆ.
ಭಾರತದ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ!
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟುಗೂಡಿಸಿ ಭಾರತ ಕಳೆದ ವಾರ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಾಲಾಪಾನಿ ಪ್ರದೇಶವನ್ನು ಗುರುತಿಸಲಾಗಿತ್ತು.
ಭಾರತದ ಹೊಸ ನಕ್ಷೆ : ವಿಶ್ವಸಂಸ್ಥೆ ನಿರ್ಣಯಕ್ಕೆ ಪಾಕ್ ಕ್ಯಾತೆ
ಭಾರತದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನೇಪಾಳ, ಭಾರತ ಕಾಲಾಪಾನಿ ಪ್ರದೇಶವನ್ನು ಅಕ್ರಮವಾಗಿ ತನ್ನದೆಂದು ಗುರುತಿಸಿದೆ ಎಂದು ಆರೋಪಿಸಿದೆ. ಕಾಲಾಪಾನಿ ತನಗೆ ಸೇರಿದ್ದ ಪ್ರದೇಶವಾಗಿದ್ದು, ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನೇಪಾಳ ಸ್ಪಷ್ಟಪಡಿಸಿದೆ.
ದೇಶದ ಹೊಸ ನಕ್ಷೆಯಲ್ಲಿ ಆಂಧ್ರ ರಾಜಧಾನಿ ಅಮರಾವತಿ ಇಲ್ಲ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ನೇಪಾಳ ವಿದೇಶಾಂಗ ಸಚಿವಾಲಯ, ಭಾರತದ ಹೊಸ ರಾಜಕೀಯ ನಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೇ ಗಡಿ ಸಂಬಂಧಿತ ಸಮಸ್ಯೆಗಳ ಕುರಿತು ಸಮಾಲೋಚನೆಗಾಗಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆಗೆ ನೇಪಾಳ ಆಗ್ರಹಿಸಿದೆ.