
ಗ್ಲಾಸ್ಗೋ/ಬ್ರಿಟನ್ (ಫೆ.24): ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರಕ್ಕೆ ಸರ್ಟಿಪಿಕೇಟ್ ನೀಡುವುದಕ್ಕೆ ಸೆನ್ಸಾರ್ ಮಂಡಳಿ ನಿರಾಕರಿಸಿರುವುದಕ್ಕೆ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅಸಮಾಧಾನ ವ್ಯಕ್ತಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ ಿಲ್ಲದಿರುವ ಸಮಾಜದ ಒಂದು ಭಾಗವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಇದು ಮಹಿಳೆ ಪ್ರಧಾನ ಕಥೆ ಹಾಗೂ ಗುಟ್ಟುಗಳನ್ನು ಒಳಗೊಂಡಿದೆ. ಮಹಿಳಾ ದೃಷ್ಟಿಕೋನದಲ್ಲಿ ಸಿಬಿಎಫ್ ಸಿಗೆ ಸಮಸ್ಯೆಯಿದ್ದರೆ ಇದು ನನಗೆ ನೋವುಂಟು ಮಾಡಿದೆ. ಜಗತ್ತೇ ಈ ಚಿತ್ರವನ್ನು ಮೆಚ್ಚಿಕೊಂಡಿರುವಾಗ ಸಿಬಿಎಫ್ ಸಿ ಈ ರೀತಿ ಧೋರಣೆ ತಾಳುವುದು ಅಸಂಬದ್ಧವಾಗಿದೆ. ಯಾವ ಕಾರಣಕ್ಕಾಗಿ ಜನರಿಂದ ಗುರುತಿಸಲ್ಪಟ್ಟಿದೆಯೋ ಅದೇ ಕಾರಣಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಲು ನಿರಾಕರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರ ನಿರ್ಮಾಪಕ ಪ್ರಕಾಶ್ ಜಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಸರಿ ತಪ್ಪುಗಳನ್ನು ತಿಳಿಯುವಷ್ಟು ಭಾರತೀಯ ವೀಕ್ಷಕರು ಪ್ರಬುದ್ಧರು ಎಂದು ಹೇಳಿದ್ದಾರೆ. ರಾಜನೀತಿ, ಜೈ ಗಂಗಾಜಲ್, ಆರಕ್ಷಣ್ ಚಿತ್ರ ಬಿಡುಗಡೆಯಲ್ಲೂ ಇದೇ ಸಮಸ್ಯೆ ಎದುರಾಗಿತ್ತು. ಆಗ ನ್ಯಾಯಾಧೀಕರಣ ಮಂಡಳಿಗೆ ಹೋಗಿದ್ದೆವು. ಈಗಲೂ ಅದರ ಮೊರೆ ಹೋಗುತ್ತೇವೆ ಎಂದು ಪ್ರಕಾಶ್ ಜಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.