ಪಕ್ಷಗಳಿಗೆ ಬರುತ್ತಿದೆ ಶೇ.53ರಷ್ಟು ಅನಾಮಿಕ ದೇಣಿಗೆ!: ಯಾರಿಗೆಷ್ಟು? ಇಲ್ಲಿದೆ ವಿವರ

By Web DeskFirst Published Jan 24, 2019, 11:12 AM IST
Highlights

ಪಕ್ಷಗಳಿಗೆ ಅನಾಮಿಕ ದೇಣಿಗೆಯೇ ಅಧಿಕ| ಶೇ.53ರಷ್ಟು ಆದಾಯ ‘ಅನಾಮಧೇಯ’| 1293 ಕೋಟಿಯಲ್ಲಿ 689 ಕೋಟಿ ಕೊಟ್ಟಿದ್ಯಾರು ಗೊತ್ತಿಲ್ಲ

ನವದೆಹಲಿ[ಜ.24]: ಕಪ್ಪುಹಣದ ಬಗ್ಗೆ ವ್ಯಾಪಕ ಚರ್ಚೆ ನಡೆದಿರುವ ನಡುವೆಯೇ, ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಗಳಲ್ಲಿ ಶೇ.50ರಷ್ಟುದೇಣಿಗೆ ‘ಅನಾಮಿಕ’ ಮೂಲದಿಂದ ಬಂದಿದ್ದು ಎಂಬ ವಿಷಯವನ್ನು ಸರ್ಕಾರಿ ಅಂಕಿ-ಅಂಶಗಳನ್ನು ಆಧರಿಸಿ ಸರ್ಕಾರೇತರ ಸಂಸ್ಥೆಯೊಂದು ಬಹಿರಂಗಪಡಿಸಿದೆ.

ಚುನಾವಣಾ ಆಯೋಗಕ್ಕೆ ಮಾನ್ಯತೆ ಪಡೆದ ಹಲವು ಪಕ್ಷಗಳು ತಮ್ಮ ಆದಾಯ ತೆರಿಗೆ ಪಾವತಿಯ ವಿವರಗಳನ್ನು ಸಲ್ಲಿಸಿದ್ದು, ಅವುಗಳನ್ನು ಎಡಿಆರ್‌ ಎಂಬ ಚುನಾವಣೆ ಕುರಿತಾದ ಸ್ವಯಂಸೇವಾ ಸಂಸ್ಥೆ ಪಡೆದುಕೊಂಡಿದೆ.

ಬಿಜೆಪಿ, ಕಾಂಗ್ರೆಸ್‌, ಸಿಪಿಐ, ಬಿಎಸ್‌ಪಿ, ಟಿಎಂಸಿ ಹಾಗೂ ಎನ್‌ಸಿಪಿ- 2017-18ನೇ ಸಾಲಿನ ಆದಾಯ 1293.05 ಕೋಟಿ ರು. ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಆದರೆ ಈ ಪೈಕಿ 689.44 ಕೋಟಿ ರುಪಾಯಿ ಆದಾಯವು ‘ಅನಾಮಿಕ ಮೂಲದಿಂದ ಬಂದಿದ್ದು’ ಎಂದು ಹೇಳಿವೆ. ಇದರರ್ಥ ಶೇ.53ರಷ್ಟುಆದಾಯವು ಅನಾಮಿಕ ಮೂಲದಿಂದ ಬಂದಿದ್ದು ದೃಢಪಡುತ್ತದೆ.

ಇದೇ ವೇಳೆ, ಬಿಜೆಪಿಗೆ ಅನಾಮಿಕ ಮೂಲದಿಂದ 553.38 ಕೋಟಿ ರುಪಾಯಿ ದಾಯ ಬಂದಿದೆ. ರಾಷ್ಟ್ರೀಯ ಪಕ್ಷಗಳಿಗೆ ಬಂದ ಆದಾಯದಲ್ಲಿ ಶೇ.80ರಷ್ಟುಹಣವು ಅನಾಮಧೇಯ ಮೂಲದ್ದೇ ಆಗಿದೆ ಎಂದು ಎಡಿಆರ್‌ ಹೇಳಿದೆ.

20 ಸಾವಿರ ರುಪಾಯಿಗಿಂತ ಒಳಗೆ ದೇಣಿಗೆ ನೀಡಬಯಸುವವರು ಯಾವುದೇ ಹೆಸರಿನ ಮೂಲ ಹೇಳದೇ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ.

click me!