ಕಾಂಗ್ರೆಸ್ ಈ ಹೆಜ್ಜೆ ಇಟ್ಟರೆ ಬಿಜೆಪಿಗೆ ಕೇವಲ 5 ಸೀಟು!: ಸಮೀಕ್ಷೆ ಬಿಚ್ಚಿಟ್ಟ ಸಂಗತಿ

Published : Jan 24, 2019, 09:24 AM IST
ಕಾಂಗ್ರೆಸ್ ಈ ಹೆಜ್ಜೆ ಇಟ್ಟರೆ ಬಿಜೆಪಿಗೆ ಕೇವಲ 5 ಸೀಟು!: ಸಮೀಕ್ಷೆ ಬಿಚ್ಚಿಟ್ಟ ಸಂಗತಿ

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆಯೊಂದು ನಡೆದಿದೆ. ಇದರ ಅನುಸಾರ ಕಾಂಗ್ರೆಸ್ ಒಂದು ವೇಳೆ 2019ರ ಚುನಾವಣೆಯಲ್ಲಿ ಒಂದು ನಿರ್ಧಾರ ತೆಗೆದುಕೊಂಡರೆ ಬಿಜೆಪಿಗೆ ಹೊಡೆತ ತಪ್ಪಿದ್ದಲ್ಲ ಎನ್ನಲಾಗಿದೆ. ಅಷ್ಟಕ್ಕೂ ಆ ಹೆಜ್ಜೆ ಯಾವುದು? ಇಲ್ಲಿದೆ ವಿವರ

ನವದೆಹಲಿ[ಜ.24]: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ವಾದ್ರಾ ನೇಮಕವಾದ ದಿನವೇ, ತಕ್ಷಣಕ್ಕೆ ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆ ನಡೆದರೆ ಏನಾಗಬಹುದು ಎಂದು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಇಂಡಿಯಾ ಟುಡೇ ಮತ್ತು ಕಾರ್ವಿ ಈ ಸಮೀಕ್ಷೆ ನಡೆಸಿವೆ.

ಸಮೀಕ್ಷೆ ಅನ್ವಯ, ತಕ್ಷಣಕ್ಕೆ ಚುನಾವಣೆ ನಡೆದರೆ ಬಿಎಸ್‌ಪಿ- ಎಸ್‌ಪಿ ಮೈತ್ರಿಕೂಟ 58 ಸ್ಥಾನ ಗೆಲ್ಲಲಿದೆ. ಇನ್ನು ಕಳೆದ ಬಾರಿ 73 ಸೀಟು ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ 18 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಒಂದು ವೇಳೆ ಎಸ್‌ಪಿ- ಬಿಎಸ್‌ಪಿ- ಕಾಂಗ್ರೆಸ್‌- ಆರ್‌ಎಲ್‌ಡಿ ಮತ್ತು ಇತರೆ ಪಕ್ಷಗಳು ಒಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಅವರು ಭರ್ಜರಿ 75 ಸೀಟು ಗೆಲ್ಲಲಿವೆ. ಎನ್‌ಡಿಎ ಬಲ 73ರಿಂದ ಕೇವಲ 5ಕ್ಕೆ ಇಳಿಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಎಂಸಿ ಚುನಾವಣೆಯಲ್ಲಿ ಗೆಲುವು: ರಾಜ್‌ಠಾಕ್ರೆ, ಉದ್ಧವ್ ಠಾಕ್ರೆಗೆ ರಸಮಲೈ ಕಳುಹಿಸಿದ ಬಿಜೆಪಿಯ ಬಗ್ಗಾ
Maharashtra Municipal Corporation Results: ಬಿಎಂಸಿಯಲ್ಲಿ ಬಹುಮತದ ಗಡಿ ದಾಟಿದ ಮಹಾಯುತಿ, ಠಾಕ್ರೆ ಸರ್ಕಾರ್‌ ಅಧಿಕಾರ ಅಂತ್ಯ!