
ವಾಷಿಂಗ್ಟನ್[ಜೂ.7): ಖಗೋಳಪ್ರೀಯರಿಗೆ ಸಂತಸದ ಸುದ್ದಿಯೊಂದನ್ನು ನಾಸಾ ನೀಡಿದೆ. ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರುವಿನ ಅಧ್ಯಯನದಲ್ಲಿ ನಿರತವಾದ ಜುನೋ ಮಿಷನ್‌ನ್ನು ಮೂರು ವರ್ಷಗಳವರೆಗೆ ನಾಸಾ ವಿಸ್ತರಿಸಿದೆ.
2011 ರಲ್ಲಿ ನಾಸಾದಿಂದ ಉಡಾಯಿಸಲಪಟ್ಟ ಜುನೋ ನೌಕೆ, 2016ರಲ್ಲಿ ಗುರುಗ್ರಹದ ಕಕ್ಷೆಯನ್ನು ತಲುಪಿತ್ತು. ಅಂದಿನಿಂದ ನಿರಂತರವಾಗಿ ಗುರುಗ್ರಹದ ಕುರಿತು ಮಹತ್ವದ ಮಾಹಿತಿಗಳನ್ನು ಜುನೋ ರವಾನಿಸುತ್ತಲೇ ಇದೆ.
ನಾಸಾದ ಈ ಮೊದಲಿನ ಯೋಜನೆಯಂತೆ ಜುನೋ ಈ ವರ್ಷದ ಫೆಬ್ರುವರಿಯಲ್ಲೇ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಗುರುಗ್ರಹದ ಕುರಿತು ಮತ್ತಷ್ಟು ಮಾಹಿತಿಯ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಜುನೋ ಮಿಷನ್‌ನನ್ನು ವಿಸ್ತರಿಸಲು ನಾಸಾ ನಿರ್ಧರಿಸಿದೆ.
ಪ್ರತಿ 14 ದಿನಗಳಿಗೊಮ್ಮೆ ಗುರುಗ್ರಹವನ್ನು ಸುತ್ತು ಹೊಡೆಯುತ್ತಿರುವ ಜುನೋ, ಆ ದೈತ್ಯ ಗ್ರಹದ ಕುರಿತಾದ ಮಾನವನ ತಿಳುವಳಿಕೆಯನ್ನು ಅಗಾಧವಾಗಿ ಹೆಚ್ಚಿಸಿದೆ. ಇದೀಗ ಜುನೋ ಮಿಷನ್ ಅವಧಿಯನ್ನು 2022 ರವರೆಗೆ ವಿಸ್ತರಿಸುವುದರಿಂದ ಖಗೋಳಪ್ರೀಯರ ಖುಷಿ ಎಲ್ಲೆ ಮೀರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.