ಶರದ್ ಪವಾರ್ ವೇತನ ಭತ್ಯೆ ತಡೆಹಿಡಿಯಲು ಸುಪ್ರೀಂ ಆದೇಶ..!

First Published Jun 7, 2018, 2:45 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿ ಶರದ್ ಯಾದವ್‌ಗೆ ತೀವ್ರ ಹಿನ್ನಡೆ

ಶರದ್ ವೇತನ ಮತ್ತು ಇತರ ಭತ್ಯೆಗೆ ಕೋಕ್ ನೀಡಿದ ಸರ್ವೋಚ್ಛ ನ್ಯಾಯಾಲಯ

ವಿಮಾನ ಹಾಗೂ ರೈಲ್ವೆ ಟಿಕೆಟ್‌ಗೂ ಕತ್ತರಿ ಹಾಕಿದ ಸುಪ್ರೀಂ ಆದೇಶ

ರಾಜ್ಯಸಭೆ ಸದಸ್ಯತ್ವ ಅನರ್ಹ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್‌ಗೆ ಸೂಚನೆ

ನವದೆಹಲಿ(ಜೂ.7): ಬಿಹಾರ ಜೆಡಿಯು ಮಾಜಿ ಮುಖಂಡ ಶರದ್ ಯಾದವ್ ಅವರ ವೇತನ ಭತ್ಯೆಯನ್ನು ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಶರದ್ ಯಾದವ್ ಅವರಿಗೆ ಭಾರೀ ಮುಖಭಂಗವಾಗಿದೆ.

ಶರದ್ ಯಾದವ್ ಅವರಿಗೆ ವೇತನ, ಭತ್ಯೆ, ವಿಮಾನ ಹಾಗೂ ರೈಲ್ವೆ ಟಿಕೆಟ್ ಭತ್ಯೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಜೊತೆಗೆ ಜುಲೈ 12ರೊಳಗೆ ನವದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಸೂಚಿಸಿದೆ. 

ಇದೇ ವೇಳೆ ರಾಜ್ಯ ಸಭೆ ಸದಸ್ಯತ್ವನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಶರದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್‌ ಗೆ ಸುಪ್ರೀಂಕೋರ್ಟ್ ಸೂಚನೆ ಕೂಡ ನೀಡಿದೆ.

ಅದರ್ಶ್ ಕುಮಾರ್ ಗೋಯೆಲ್ ಮತ್ತು ಅಶೋಕ್ ಭೂಷಣ್ ಅವರಿದ್ದ  ನ್ಯಾಯಪೀಠ ಈ ಆದೇಶ ಹೊರಡಿಸಿದ್ದು,ನವದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯಲ್ಲಿ ಶರದ್ ಯಾದವ್ ಮುಂದುವರಿಯುಂತೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜೆಡಿಯು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು 

click me!