2019ರಲ್ಲಿಯೂ ನರೇಂದ್ರ ಮೋದಿಯೇ ಪ್ರಧಾನಿ

First Published Jul 9, 2018, 7:38 PM IST
Highlights

ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದರೂ, ಪ್ರತಿಪಕ್ಷ ಸ್ಥಾನದಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಿ ಸರಕಾರ ನಡೆಸುತ್ತಿದೆ. ಆದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದು, ನರೇಂದ್ರ ಮೋದಿಯೇ ಪ್ರಧಾನಿಯಾಗಲಿದ್ದಾರೆಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ: 'ದೇವೇಗೌಡರು ಮತ್ತೆ ಪ್ರಧಾನಿ ಆಗಲು ಸಾಧ್ಯವೇ ಇಲ್ಲ. 

2019ರಲ್ಲೂ ನರೇಂದ್ರ ಮೋದಿ ಅವರೇ ದೇಶದ ಪ್ರಧಾನಿ ಆಗ್ತಾರೆ,' ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ರಾಮುಲು, 'ಕಾಂಗ್ರೆಸ್, ಜೆಡಿಎಸ್ ಒಂದಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸಂಸತ್ ಸ್ಥಾನ ಗೆಲ್ಲುತ್ತೆ.,' ಎಂದು ಹೇಳಿದ್ದಾರೆ.

'ಸಮ್ಮಿಶ್ರ ಸರಕಾರದ ಬಜೆಟ್ ಖಂಡಿಸುತ್ತೇವೆ. ಬಜೆಟ್‌ನಲ್ಲಿ ಪ್ರಮುಖವಾಗಿ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತದೆ. ಇದನ್ನು ಸಮಗ್ರ ರಾಜ್ಯ ಬಜೆಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಉತ್ತರ ಕರ್ನಾಟಕ, ಕರಾವಳಿ, ಹಳೆ ಮೈಸೂರು, ಮಲೆನಾಡೆಂದು ವಿಂಗಡಿಸಲಾಗಿದೆ. 

ಅಣ್ಣ-ತಮ್ಮಂದಿರ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಈ ಬಜೆಟ್  ಕೇವಲ ಮೂರ್ನಾಲ್ಕು ಜಿಲ್ಲೆಗೆ ಸೀಮಿತವಾಗಿದೆ,' ಎಂದು ಆರೋಪಿಸಿದರು.

'ಬಿಜೆಪಿ ಪ್ರಾಬಲ್ಯ ಇರುವ ಜಿಲ್ಲೆಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆ. ಸಾಲ ಮನ್ನಾ ಸಮರ್ಪಕವಾಗಿ ಆಗಿಲ್ಲ. ಕುಮಾರಸ್ವಾಮಿ ಸಿಎಂ ಆದ ಮೇಲೂ ರೈತರ ಆತ್ಮಹತ್ಯೆ ನಿಂತಿಲ್ಲ. ನಾನು ಸಂಸತ್‌ನಲ್ಲಿದ್ದಾಗ ಶಾಸಕನಾಗಿ ಬಂದೆ ಮತ್ತೆ ಸಂಸತ್‌ಗೆ ಹೋಗಲ್ಲ. ಕಡಿಮೆ ಸಂಖ್ಯೆ ಗೆದ್ದಿರುವ ಜೆಡಿಎಸ್‌ನವ್ರು ಸಿಎಂ ಆಗಿದ್ದಾರೆ. ಹೆಚ್ಚು ಗೆದ್ದಿರೋ ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದೇವೆ. ಆದರೆ, ನಮಗೂ ಕಾಲ ಬರುತ್ತೆ. ನಾವೂ ಸಿಎಂ ಆಗುತ್ತೇವೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ 'ಉಗ್ರ'ನೆಂದ ತಮಿಳಿಗರು
ನೋಟು ಅಪನಗದೀಕರಣ : ಹೊಸ ನೋಟಿಗೆ ಖರ್ಚು ಮಾಡಿದ್ದೆಷ್ಟು..?
‘ಮೋದಿ ಸಿದ್ಧವಿದ್ದರೂ ರಾಜ್ಯ ಬಿಜೆಪಿಗರಿಗೆ ಇದು ಬೇಕಾಗಿಲ್ಲ’
ರಾಮಮಂದಿರ ನಿರ್ಮಿಸಲು ಮೋದಿಗೆ ಸವಾಲು ಹಾಕಿದ ಮಾಜಿ ಬಿಜೆಪಿಗ
ಮೋದಿ ಸರ್ಕಾರದಿಂದ ಖರ್ಗೆ ಓಲೈಕೆ

 

click me!