ಇಸ್ರೇಲಿ ಪೊಲೀಸರು ಕೇರಳಕ್ಕೆ ಆಗಾಗ ಭೇಟಿ ನೀಡೋದ್ಯಾಕೆ?

First Published Jul 9, 2018, 6:32 PM IST
Highlights

ಇಸ್ರೇಲಿ ಪೊಲೀಸರು ವರ್ಷಕ್ಕೆರಡು ಬಾರಿ ಕೇರಳದ ಕಣ್ಣೂರಿಗೆ ಭೇಟಿ ನೀಡುತ್ತಾರೆ! ಯಾವುದೋ ಪ್ರಕರಣದ ತನಿಖೆಗೆಂದು ತಿಳಿದರೆ ತಪ್ಪು. ಬದಲಾಗಿ ತಮ್ಮ ಸಮವಸ್ತ್ರವನ್ನು ಹೊಲಿಸಿಕೊಳ್ಳಲು. ಯಾರ ಹತ್ತಿರ? ಹೊಲಿದುಕೊಡುವ ಟೈಲರ್ ಯಾರು?

ಕಣ್ಣೂರು: ಇಸ್ರೇಲಿ ಪೊಲೀಸರು ಕೇರಳದ ಕಣ್ಣೂರಿಗೆ ಆಗಾಗ ಭೇಟಿ ನೀಡ್ತಾರೆ.

ನಿಲ್ಲಿ, ನಿಲ್ಲಿ.. ಶಾಕ್ ಆಗೋ ಅಗತ್ಯವಿಲ್ಲ. ಯಾವುದೋ ಕ್ರೈಂ ತನಿಖೆಗಲ್ಲ. ಬದಲಾಗಿ ತಮ್ಮ ಯೂನಿಫಾರ್ಮ್ ಹೊಲಿಸಿಕೊಳ್ಳಲು."

ಹೌದು. ಇಸ್ರೇಲಿ ಪೊಲೀಸರ ಸಮವಸ್ತ್ರ ಸಿದ್ಧವಾಗುವುದು ಕಣ್ಣೂರಿನ ಮರ್ಯನ್ ಅಪರೆಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ.  ಸಾಮಾನ್ಯವಾಗಿ ಒಂದು ಲಕ್ಷ ಸಮವಸ್ತ್ರಗಳು ಇಲ್ಲಿ ಸಿದ್ಧವಾಗುತ್ತವೆ. ವರ್ಷದಲ್ಲಿ ಎರಡು ಬಾರಿ ಆರ್ಡರ್ ಇರುತ್ತೆ.  ಒಂದು ಸೆಟ್‌ಗೆ ಅಮೆರಿಕದಿಂದ ಬಟ್ಟೆ ಬಂದರೆ, ಮತ್ತೊಂದಕ್ಕೆ ಮುಂಬಯಿಂದ ಬರುತ್ತೆ.

ಮೊದಲು ಮಾದರಿ ಸಮವಸ್ತ್ರವೊಂದನ್ನು ಹೊಲಿದುಕೊಡ್ತಾರೆ ಈ ಕಂಪನಿಯ ಟೈಲರ್ಸ್. ಇದನ್ನು ಇಸ್ರೇಲಿ ಪೊಲೀಸರು ಓಕೆ ಮಾಡಿದರೆ, ಮಾತ್ರ ಉಳಿದ ಯೂನಿಫಾರ್ಮ್ ರೆಡಿಯಾಗುತ್ತೆ.

ಇಬ್ಬರು ಇಸ್ರೇಲಿ ಪೊಲೀಸರು ಬರ್ತಾರೆ. ಬಟ್ಟೆಯನ್ನು ಚೆಕ್ ಮಾಡಿ, ವೇರಿಫೈ ಮಾಡ್ತಾರೆ. ಎಲ್ಲವೂ ಸರಿ ಇದ್ದರೆ ಮಾತ್ರ ಓಕೆ ಎನ್ನುತ್ತಾರೆ. ಏನಾದರೂ ರಿಪೇರಿ ಇದ್ದರೆ ಮಾಡಲು ಸೂಚಿಸುತ್ತಾರೆ.
 
ಕಂಪನಿಯ ಬೇರೆ ಬೇರೆ ಟೈಲರ್ಸ್ ಸಮವಸ್ತ್ರದ ಒಂದೊಂದು ಭಾಗವನ್ನು ಸಿದ್ಧಗೊಳಿಸುತ್ತಾರೆ. ಯೂನಿಫಾರ್ಮ್ ಮೇಲಿನ ಲಾಂಛನವೂ ಇಲ್ಲಿಯೇ ಸಿದ್ಧವಾಗೋದು. ಅಂತಿಮವಾಗಿ ಎಲ್ಲವನ್ನೂ ಜೋಡಿಸಲಾಗುತ್ತೆ. ಇದನ್ನು ಐರನ್ ಮಾಡಿ, ನೀಟಾಗಿ ಪ್ಯಾಕ್ ಮಾಡಿ ಇಸ್ರೇಲ್‌ಗೆ ರವಾನಿಸಲಾಗುತ್ತದೆ.

ಮತ್ತೊಂದು ವಿಶೇಷವೆಂದರೆ 750 ಕೆಲಸಗಾರರು ಇರುವ ಈ ಕಂಪನಿಯಲ್ಲಿ 650 ಮಹಿಳೆಯರಿದ್ದಾರೆ.

click me!