ಮೋದಿ ಸರ್ಕಾರಕ್ಕೆ 4 ವರ್ಷ : ಆಟೋ ಬಾಡಿಗೆ 1 ರು.

Published : May 28, 2018, 12:32 PM IST
ಮೋದಿ ಸರ್ಕಾರಕ್ಕೆ 4 ವರ್ಷ :  ಆಟೋ ಬಾಡಿಗೆ 1 ರು.

ಸಾರಾಂಶ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ  ರಿಕ್ಷಾ ಚಾಲಕರೊಬ್ಬರು, ಒಂದು ರುಪಾಯಿ ಬಾಡಿಗೆ ಪಡೆಯುವ ಮೂಲಕ ಮೋದಿ ಮೇಲೆ ತನ್ನ ಉತ್ಕಟ ಅಭಿಮಾನ ತೋರಿಸಿದ್ದಾರೆ. 

ಕುಂದಾಪುರ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ  ರಿಕ್ಷಾ ಚಾಲಕರೊಬ್ಬರು, ಒಂದು ರುಪಾಯಿ ಬಾಡಿಗೆ ಪಡೆಯುವ ಮೂಲಕ ಮೋದಿ ಮೇಲೆ ತನ್ನ ಉತ್ಕಟ ಅಭಿಮಾನ ತೋರಿಸಿದ್ದಾರೆ. 

ಇಲ್ಲಿ ವಿನಾಯಕ  ಚಿತ್ರಮಂದಿರ ರಿಕ್ಷಾನಿಲ್ದಾಣದ ಆಟೋ ಚಾಲಕ ಸತೀಶ್ ಪ್ರಭು ಅವರು ಶನಿವಾರ ಮತ್ತು ಭಾನುವಾರ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಕರಿಂದ ಕೇವಲ ಒಂದು ರು. ಮಾತ್ರ ಪಡೆದಿದ್ದಾರೆ, ಇನ್ನೂ 3 ದಿನ ಅವರು ಇದೇ ರೀತಿ ತಮ್ಮ ಮೋದಿ ಅಭಿಮಾನ ಪ್ರದರ್ಶಿಸಲಿದ್ದಾರೆ.

ಮೋದಿ ಸರ್ಕಾರದ ಹಿಂದಿನ 3 ವರ್ಷ ಕೂಡ ಅವರು ತಮ್ಮ ಈ ರಿಯಾಯತಿ ಸೇವೆ ನೀಡಿದ್ದರು. ಮೋದಿ ಮಾಡುತ್ತಿರುವ ಅದ್ಭುತ ದೇಶ ಸೇವೆಗೆ ನಾನು ಈ ರೀತಿ ಸಣ್ಣ ಮಟ್ಟದ ಗೌರವ ಸಲ್ಲಿಸುತಿದ್ದೇನೆ ಎಂದು ಸತೀಶ್ ಪ್ರಭು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BLO Death: ಆಸ್ಪತ್ರೆಗೆ ತಲುಪುವಷ್ಟರಲ್ಲೇ ನಿಂತಿತು ಉಸಿರು! ಎಸ್‌ಐಆರ್ ಸಭೆ ಬೆನ್ನಲ್ಲೇ ಬಿಎಲ್‌ಒ ರತ್ನಮ್ಮ ಸಾವು; ಅಸಲಿ ಕಾರಣ ಏನು ಗೊತ್ತಾ?
Oil Crisis: ತೈಲ ಬಿಕ್ಕಟ್ಟಿನ ನಡುವೆ ಭಾರತದ 3 ಬಿಗ್ ಗೇಮ್ ಪ್ಲಾನ್: ಜಾಗತಿಕ ಮಾರ್ಕೆಟ್ ಕಿಂಗ್ ಆದ ಭಾರತ! 2030ರ ವೇಳೆಗೆ ಜಗತ್ತೇ ದಿಲ್ಲಿಯ ಮುಂದೆ ಕೈಚಾಚಲಿದೆ!