ಮೋದಿಗೆ ಕ್ಲಾಸ್ ತೆಗೆದುಕೊಂಡು ಹೊಸ ಪಕ್ಷ ಘೋಷಿಸಿದ ತೊಗಾಡಿಯಾ

First Published May 28, 2018, 12:17 PM IST
Highlights

 ವಿಶ್ವ ಹಿಂದೂ ಪರಿಷತ್ ಮಾಜಿ ಮುಖಂಡ ಪ್ರವೀಣ್  ತೊಗಾಡಿಯಾ  ಶೀಘ್ರದಲ್ಲೇ ಹೊಸ ಪಕ್ಷವನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಜೂನ್ 24ರಂದು ತಮ್ಮ ಹೊಸ ಪಕ್ಷಕ್ಕೆ ಚಾಲನೆ ನೀಡುವುದಾಗಿ  ಹೇಳಿದರು.

ನವದೆಹಲಿ :  ವಿಶ್ವ ಹಿಂದೂ ಪರಿಷತ್ ಮಾಜಿ ಮುಖಂಡ ಪ್ರವೀಣ್  ತೊಗಾಡಿಯಾ ಹೊಸ ಪಕ್ಷವನ್ನು ಆರಂಭ ಮಾಡುವುದಾಗಿ ಹೇಳಿದ್ದಾರೆ. ಜೂನ್ 24ರಂದು ತಮ್ಮ ಹೊಸ ಪಕ್ಷಕ್ಕೆ ಚಾಲನೆ ನೀಡುವುದಾಗಿ  ಹೇಳಿದರು.

ಇನ್ನು ಇದೇ ವೇಳೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರ ಭರವಸೆಗಳನ್ನು ಈಡೇರಿಸುವಲ್ಲಿಯೂ ಹಿಂದೆ ಉಳಿದಿದೆ. ಪ್ರಧಾನಿ ಮೋದಿ ಸರ್ಕಾರದ ಸಾಧನೆ ಶೇ. - 25ರಷ್ಟಿದ್ದು, ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಗ್ರೇಡ್ ನೀಡಿದ್ದಾರೆ. ಅಲ್ಲದೇ ಕೆಲವೊಂದು ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಹೇಳಿದಂತೆ ನಡೆಯದೇ ಯೂ ಟರ್ನ್ ಹೊಡೆದಿದ್ದಾರೆ. ಹಿಂದುತ್ವ ಐಡಿಯಾಲಜಿಯನ್ನು ಅನುಸರಿಸುವ ಅನೇಕರಿಗೆ ಅವರ ಕೆಲ ವಿಚಾರಗಳು ನೋವನ್ನುಂಟು ಮಾಡಿವೆ ಎಂದರು. 

ಅಲ್ಲದೇ ಇದೇ ವೇಳೆ ರೈತರ ಬಗ್ಗೆಯೂ ಮಾತನಾಡಿದ ಅವರು ರೈತ ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಅಲ್ಲದೇ ಅವರಿಗೆ ಉತ್ಪಾದನೆಗೆ ಆದ ವೆಚ್ಚಕ್ಕಿಂತ ಶೇ.50ರಷ್ಟು ಹೆಚ್ಚು ಹಣ ಸಿಗುವಂತಾಗಬೇಕು ಎಂದರು. 

ಇನ್ನು ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದರು.

click me!