
ಅಹಮದಾಬಾದ್[ಡಿ.23] ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ಬಿಜೆಪಿಯ ಗೆಲವುವನ್ನು ಇಲ್ಲಿ ಮಾತ್ರ ತಡೆಯಲು ಸಾಧ್ಯವಾಗಿಲ್ಲ. ಗುಜರಾತ್‌ನ ಉಪಚುನಾವಣೆಯಲ್ಲಿ ಕಮಲ ಅರಳಿದೆ.
99 ಶಾಸಕರ ಬಲ ಹೊಂದಿದ್ದ ಬಿಜೆಪಿ ಶತಕ ಬಾರಿಸಿದೆ. ಜಸ್ದಾನ್ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುನಾರ್ಜಿ ಬವಾಲಿಯಾ ಕಾಂಗ್ರೆಸ್ ನ ಅಭ್ಯರ್ಥಿ ಅವ್ಸರ್ ನಕಿಯಾ ಅವರನ್ನು 19,779 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.
ಮೋದಿ ಸರ್ಕಾರದಿಂದ ಹೊಸ ವರ್ಷಕ್ಕೆ ಜನರಿಗೆ ಭರ್ಜರಿ ಕೊಡುಗೆ
ಬವಾಲಿಯಾ 2017 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಕೇವಲ 3 ಗಂಟೆಗಳಲ್ಲಿ ಬವಾಲಿಯಾಗೆ ಗುಜರಾತ್ ಸಂಪುಟದಲ್ಲಿ ಸ್ಥಾನವೂ ಸಿಕ್ಕಿತ್ತು. ಈ ಗೆಲುವಿನ ಪರಿಣಾಮ ಬಿಜೆಪಿ ಶತಕ ಬಾರಿಸಿದ್ದರೆ ಕಾಂಗ್ರೆಸ್ 77 ರಿಂದ 76ಕ್ಕೆ ಇಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.