ನಟ ಗಣೇಶ್ ಹಾಗೂ ನಿರ್ದೇಶಕ ನಾರಾಯಣ್ ನಡುವೆ ಜಟಾಪಟಿ : 75 ಲಕ್ಷ ರೂ. ನೋಟಿಸ್'ಗೆ 10 ಕೋಟಿಯ ಮಾನನಷ್ಟ ಮೊಕದ್ದಮೆ

Published : Feb 26, 2017, 01:12 AM ISTUpdated : Apr 11, 2018, 12:44 PM IST
ನಟ ಗಣೇಶ್ ಹಾಗೂ ನಿರ್ದೇಶಕ ನಾರಾಯಣ್ ನಡುವೆ ಜಟಾಪಟಿ : 75 ಲಕ್ಷ ರೂ. ನೋಟಿಸ್'ಗೆ 10 ಕೋಟಿಯ ಮಾನನಷ್ಟ ಮೊಕದ್ದಮೆ

ಸಾರಾಂಶ

2007ರಲ್ಲಿ  ಬಿಡುಗಡೆಯಾದ 'ಚಲುವಿನ ಚಿತ್ತಾರ' ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇಂದಿಗೂ ಮನೆಮಾತಾಗಿರುವ ಸಿನಿಮಾ. ಪ್ರೇಮಕಥೆ ದುರಂತದಲ್ಲಿ ಅಂತ್ಯಕಂಡ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಅದ್ಭುತವಾಗಿ ನಟಿಸಿದ್ದರೆ, ಅಷ್ಟೆ ಅಚ್ಚುಕಟ್ಟಾಗಿ ತೆರೆಯ ಮೇಲೆ ಇಳಿಸಿದ್ದರು ನಿರ್ದೇಶಕ ಎಸ್. ನಾರಾಯಣ್. ಆದರೆ ಇದೇ ಸಿನಿಮಾ ಈಗ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ.

ಬೆಂಗಳೂರು(ಫೆ.26): ಗಾಂಧಿನಗರದಲ್ಲಿ ನಿರ್ದೇಶಕ ಹಾಗೂ ನಟರ ನಡುವೆ  ಕೋರ್ಟ್ ವಾರ್ ಶುರುವಾಗಿದೆ. ಅದು 10 ವರ್ಷಗಳ ಹಿಂದೆ ತೆರೆಕಂಡ ಸಿನಿಮಾಕ್ಕೆ ಸಂಬಂಧಿಸಿದಂತೆ. ಆ ಚಿತ್ರ ಇಬ್ಬರಿಗೂ ಬ್ರೇಕ್ ಕೊಟ್ಟಿತ್ತು. ಆದರೆ ಈಗ ಅದೇ ಸಿನಿಮಾದಿಂದ ಇಬ್ಬರಿಗೂ ಮನಸ್ತಾಪ ಶುರುವಾಗಿ ಕೋರ್ಟ್ ಮೆಟ್ಟಿಲೇರಿದೆ.

2007ರಲ್ಲಿ  ಬಿಡುಗಡೆಯಾದ 'ಚಲುವಿನ ಚಿತ್ತಾರ' ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇಂದಿಗೂ ಮನೆಮಾತಾಗಿರುವ ಸಿನಿಮಾ. ಪ್ರೇಮಕಥೆ ದುರಂತದಲ್ಲಿ ಅಂತ್ಯಕಂಡ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಅದ್ಭುತವಾಗಿ ನಟಿಸಿದ್ದರೆ, ಅಷ್ಟೆ ಅಚ್ಚುಕಟ್ಟಾಗಿ ತೆರೆಯ ಮೇಲೆ ಇಳಿಸಿದ್ದರು ನಿರ್ದೇಶಕ ಎಸ್. ನಾರಾಯಣ್. ಆದರೆ ಇದೇ ಸಿನಿಮಾ ಈಗ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ.

ಚಲುವಿನ ಚಿತ್ತಾರ ಸಿನಿಮಾದಲ್ಲಿ ಜಾಹಿರಾತು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಫೋಟೊ ಬಳಕೆ ಮಾಡಿಕೊಳ್ಳಲಾಗಿತ್ತು. ಫೋಟೊ ಬಳಸಿಕೊಂಡಿದ್ದಕ್ಕಾಗಿ ದೊಡ್ಡ ಮಟ್ಟದಲ್ಲಿ  ಸಂಭಾವನೆಯು ದೊರಕಿತ್ತು. ಒಪ್ಪಂದದ ಪ್ರಕಾರ ಸಂಭಾವನೆಯಲ್ಲಿ ನನಗೂ ಪಾಲು ಕೊಡಬೇಕಿತ್ತು. ಆದರೆ ಪೂರ್ತಿ ಪಾಲನ್ನು ನಿರ್ದೇಶಕ ನಾರಾಯಣ್ ಒಬ್ಬರೆ ತೆಗೆದುಕೊಂಡಿದ್ದಾರೆ.  ಒಪ್ಪಂದದ ಪ್ರಕಾರ ನನಗೂ ಪಾಲು ನೀಡಿರದ ಕಾರಣ ಎಸ್. ನಾರಾಯಣ ಅವರು 75 ಲಕ್ಷ ನೀಡಬೇಕೆಂದು ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದಾರೆ.

ನೋಟಿಸ್'ನಿಂದ ಸಿಡಿಮಿಡಿಗೊಂಡ ನಿರ್ದೇಶಕ ಎಸ್. ನಾರಾಯಣ್ ' ನಾನು ಬೆಳಸಿದ ಹುಡುಗ ನನಗೆ ನೋಟಿಸ್ ನೀಡಿ ನನಗೆ ಅವಮಾನ ಉಂಟು ಮಾಡಿದ್ದಾನೆ. ಈ ಅವಮಾನಕ್ಕೆ ಪ್ರತಿಯಾಗಿ ಗಣೇಶ್ 10 ಕೋಟಿ ಪರಿಹಾರ ನೀಡಬೇಕೆಂದು  ಗೋಲ್ಡನ್ ಸ್ಟಾರ್'ಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದ್ದು, ಕೂಡಲೇ ಕೇಸ್ ವಾಪಸ್ ಪಡೆಯಬೇಕೆಂದು ಗಣೇಶ್'ಗೆ ನಾರಾಯಣ್ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿಯಲ್ಲಿ ಕೊನೆ ದಿನ 11 ಗಂಟೆ ಅಧಿವೇಶನ ನಡೆಸಿ ಹೊರಟ್ಟಿ ದಾಖಲೆ
Winter: ಚಳಿಗಾಲದಲ್ಲಿ ಈ ಟ್ರಿಕ್ಸ್‌ನಿಂದ ಮನೆ ಬೆಚ್ಚಗಿಡಿ, ಚಳಿ ನಿಮಿಷದಲ್ಲಿ ಓಡಿಹೋಗುತ್ತೆ