ಉಪಚುನಾವಣಾ ಕಣ ನಿರ್ಧರಿಸಲಿದೆ ಹಲವರ ರಾಜಕೀಯ ಭವಿಷ್ಯ: ಕಾಂಗ್ರೆಸ್ ಗೆದ್ದರೆ ಪರಮೇಶ್ವರ್ ಹಾದಿ ಸುಗಮ

Published : Mar 26, 2017, 03:46 AM ISTUpdated : Apr 11, 2018, 01:02 PM IST
ಉಪಚುನಾವಣಾ ಕಣ ನಿರ್ಧರಿಸಲಿದೆ ಹಲವರ ರಾಜಕೀಯ ಭವಿಷ್ಯ: ಕಾಂಗ್ರೆಸ್ ಗೆದ್ದರೆ ಪರಮೇಶ್ವರ್ ಹಾದಿ ಸುಗಮ

ಸಾರಾಂಶ

ನಂಜನಗೂಡು ಉಪಚುನಾವಣೆ ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಭವಿಷ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಮೌಲ್ಯಮಾಪನದ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ಚು ಚಿಂತಿತರಾಗಿರುವವರು ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹಸಚಿವ ಡಾ. ಜಿ. ಪರಮೇಶ್ವರ್. ಯಾಕೆಂದರೆ ಈ ಉಪಚುನಾವಣೆ ಪರಮೇಶ್ವರ್ ದಲಿತ ಮತಗಳನ್ನು ಸೆಳೆಯಬಲ್ಲ ನಾಯಕ ಹೌದೋ ಅಲ್ಲವೋ ಎಂಬುದನ್ನು ಕೂಡಾ ನಿರ್ಧರಿಸಲಿದೆ.

ಮೈಸೂರು(ಮಾ.26): ನಂಜನಗೂಡು ಉಪಚುನಾವಣೆ ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಭವಿಷ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಮೌಲ್ಯಮಾಪನದ ಪ್ರಶ್ನೆಯಾಗಿ ಮಾತ್ರ ಉಳಿದಿಲ್ಲ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ಚು ಚಿಂತಿತರಾಗಿರುವವರು ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹಸಚಿವ ಡಾ. ಜಿ. ಪರಮೇಶ್ವರ್. ಯಾಕೆಂದರೆ ಈ ಉಪಚುನಾವಣೆ ಪರಮೇಶ್ವರ್ ದಲಿತ ಮತಗಳನ್ನು ಸೆಳೆಯಬಲ್ಲ ನಾಯಕ ಹೌದೋ ಅಲ್ಲವೋ ಎಂಬುದನ್ನು ಕೂಡಾ ನಿರ್ಧರಿಸಲಿದೆ.

ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಶ್ರೀನಿವಾಸ ಪ್ರಸಾದ್ ಸಿಡಿದ ಪರಿಣಾಮ ಎದುರಾಗಿರುವುದೇ ನಂಜನಗೂಡು ಉಪ ಚುನಾವಣೆ. ಆದರೆ ಈಗ ಕಾಂಗ್ರೆಸ್'ನಲ್ಲಿ ಸಿಎಂ ಸಿದ್ದರಾಮಯ್ಯ, ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರಿಗಿಂತ ಹೆಚ್ಚಾಗಿ ಉಪಚುನಾವಣೆಯ ಗೆಲುವು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಬೇಕಾಗಿದೆ.

ಕೇಶವಮೂರ್ತಿ ಗೆದ್ದರೆ ಸುಗಮವಾಗಲಿದೆ ಪರಮೇಶ್ವರ್ ಹಾದಿ!

ನಂಜನಗೂಡು  ಕ್ಷೇತ್ರ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರ. ಇಷ್ಟು ಸಮಯ ದಲಿತ ಫೇಸ್ ವ್ಯಾಲ್ಯೂ ಹೊಂದಿದ್ದ ಶ್ರೀನಿವಾಸ ಪ್ರಸಾದ್ ಈಗ ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಕಾರಣ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್ ಪರಮೇಶ್ವರ್ ಅವರನ್ನೇ ನೆಚ್ಚಿಕೊಂಡಿದೆ. ಹೀಗಾಗಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರ ಜೊತೆಗೆ ಕಳಲೆ ಕೇಶವಮೂರ್ತಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಬೇಕಾದ ಅನಿವಾರ್ಯತೆ ಕೆಪಿಸಿಸಿ ಅಧ್ಯಕ್ಷರಿಗೆ ಉಂಟಾಗಿದೆ. ಸಾಲದ್ದಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ದೊರೆಯದ ಕಾರಣ ಅರೆ ಮನಸ್ಸಿನಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ದಲಿತ ಮತ ಬ್ಯಾಂಕ್ ಹಿಡಿದಿಟ್ಟುಕೊಳ್ಳಲು ಪರಮೇಶ್ವರ್ ಅಖಾಡದಲ್ಲಿ ಉಳಿಯಲೇಬೇಕಾಗಿದೆ.

ಉಪಚುನಾವಣೆಯಲ್ಲಿ ಸೋತರೆ ಪರಮೇಶ್ವರ್ ಗೆ ಹಿನ್ನಡೆಯಾಗಲಿದೆ

ಒಂದು ವೇಳೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದಲ್ಲಿ ಅದು ಪರಮೇಶ್ವರ್ ಅವರಿಗೆ ನೇರ ಹಿನ್ನೆಡೆಯಾಗಲಿದೆ. ಯಾಕಂದರೆ ದಲಿತ ಮತಗಳನ್ನು ಸೆಳೆಯಬಲ್ಲ ಸಾಮರ್ಥ್ಯ ಪರಮೇಶ್ವರ್ ಅವರಲ್ಲಿಲ್ಲ ಎಂಬ ಸಂದೇಶ ಕೂಡಾ ಫಲಿತಾಂಶದ ಜೊತೆ ಜೊತೆಯಲ್ಲೇ  ರವಾನೆಯಾಗಿ ಬಿಡುತ್ತದೆ. ಕಾಂಗ್ರೆಸ್ ಗೆದ್ದರೆ ರಾಜ್ಯದ ದಲಿತ ಸಮುದಾಯದ ನಾಯಕ ಎಂಬ ಆಧಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲೇ ಮುಂದುವರೆಯಲು ಪ್ರಯತ್ನಿಸುತ್ತಿರುವ  ಪರಮೇಶ್ವರ್ ಪ್ರಯತ್ನಕ್ಕೆ ಇನ್ನಷ್ಟು ಬಲ ಬರಲಿದೆ. ಇಲ್ಲದೇ ಹೋದಲ್ಲಿ ಮತ್ತೆ ರಾಜ್ಯದಲ್ಲಿ ದಲಿತ ಮತಬ್ಯಾಂಕ್ ಗಾಗಿ‌ ರಾಷ್ಟ್ರ ರಾಜಕಾರಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಮತ್ತೆ ರಾಜ್ಯಕ್ಕೆ ವಾಪಸಾಗಬೇಕೆಂಬ ಕೂಗು ಶುರುವಾಗಲೂ ಕೂಡಾ ಆಸ್ಪದವಾಗಬಹುದಾದ ಸಾಧ್ಯತೆಯೂ ಇದೆ.

ಹೀಗಾಗಿ, ಮಂತ್ರಿ ಸ್ಥಾನವನ್ನು ತೊರೆದಾದರೂ ಸರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಅಭಿಲಾಷೆಯೊಂದಿಗೆ ಪ್ರಯತ್ನದಲ್ಲಿರುವ ಡಾ. ಜಿ. ಪರಮೇಶ್ವರ್ ಅವರಿಗೆ ನಂಜನಗೂಡು ಉಪಚುನಾವಣೆ ಪ್ರಮುಖವಾಗಿ ಪರಿಣಮಿಸಿದೆ. ಇಲ್ಲಿ‌ ಕಾಂಗ್ರೆಸ್ ಗೆದ್ದರೆ ಪರಮೇಶ್ವರ್ ಹಾದಿ ಸುಗಮವಾಗಲಿದ್ದು, ಸೋತರೆ ಪರಮೇಶ್ವರ್ ಅವರ ಪ್ರಯತ್ನಕ್ಕೂ ಹಿನ್ನೆಡೆಯಾಗಲಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ