ಶಿಲ್ಪಕಲೆಗಳ ತವರೂರಿನಲ್ಲಿ ಇಂದಿನಿಂದ ರೈಲು ಸಂಚಾರ: ಸಿಎಂ ಸೇರಿದಂತೆ ಕೇಂದ್ರ ಸಚಿವರಿಂದ ಚಾಲನೆ

By Suvarna Web DeskFirst Published Mar 26, 2017, 2:41 AM IST
Highlights

ಅದು ಶಿಲ್ಪಕಲೆಗಳ ತವರೂರು ಹಾಸನದ ಜನರ ಎರಡು ದಶಕಗಳ ಕನಸು, ಆ ಕನಸು ಈ ನನಸಾಗಿದೆ. ಇಂದಿನಿಂದ  ಹಾಸನ-ಬೆಂಗಳೂರು ರೈಲು ಸಂಚಾರ ಆರಂಭವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಹಾಸನ(ಮಾ.26): ಅದು ಶಿಲ್ಪಕಲೆಗಳ ತವರೂರು ಹಾಸನದ ಜನರ ಎರಡು ದಶಕಗಳ ಕನಸು, ಆ ಕನಸು ಈ ನನಸಾಗಿದೆ. ಇಂದಿನಿಂದ  ಹಾಸನ-ಬೆಂಗಳೂರು ರೈಲು ಸಂಚಾರ ಆರಂಭವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಶಿಲ್ಪಕಲೆಗಳ ತವರೂರಿನ ಕನಸು ನನಸಾಗುವ ಸಮಯ ಇದೀಗ ಬಂದಿದೆ. ಹಾಸನದಿಂದ ಬೆಂಗಳೂರಿಗೆ ರೈಲು ಸಂಚಾರಕ್ಕೆ ಶುಭಗಳಿಗೆ ಬಂದಿದ್ದು, ಇಂದು ಚಾಲನೆ ದೊರೆಯಲಿದೆ. 1997ರಲ ಕೇಂದ್ರ ರೈಲ್ವೇ ಬಜೆಟ್‍ನಲ್ಲಿ ಶ್ರವಣಬೆಳಗೊಳದಿಂದ ಬೆಂಗಳೂರಿಗೆ ರೈಲ್ವೇ ಮಾರ್ಗ ನಿರ್ಮಿಸಲು 400 ಕೋಟಿ ಹಣವನ್ನು ಮಂಜೂರು ಮಾಡಲಾಗಿತ್ತು. ಆದರೆ ಈಗ 20 ವರ್ಷಗಳ ನಂತ್ರ ಈ ಕಾಮಗಾರಿ ಪೂರ್ಣಗೊಂಡಿದ್ದು, 1300 ಕೋಟಿ ಹಣ ವೆಚ್ಚವಾಗಿದೆ.

ಹಾಸನದಿಂದ ಬೆಂಗಳೂರಿಗೆ ನೇರವಾಗಿ ಅಂದರೆ ಕೇವಲ 174 ಕಿ.ಮೀ ದೂರದಲ್ಲಿ ಬೆಂಗಳೂರು ಸಂಚರಿಸಬಹುದಾಗಿದೆ. ಬೆಳಗ್ಗೆ 6.30ಕ್ಕೆ ಹಾಸನದಿಂದ ಹೊರಡುವ ರೈಲು, 9.15ಕ್ಕೆ ಬೆಂಗಳೂರು ತಲುಪಲಿದೆ. ಪುನಃ ಸಂಜೆ 6.15ಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ರೈಲು ತೆರಳಲಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಯೋಜನೆ ಮಂಜೂರಾಗಿದ್ದರಿಂದ ಸಾಮಾನ್ಯವಾಗಿ ಜೆಡಿಎಸ್​ ನಾಯಕರು ಸಂತಸಗೊಂಡಿದ್ದಾರೆ.

ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಜೂರಾಗಿದ್ದ ಈ ಕನಸಿನ ಯೋಜನೆ ಕೊನೆಗೂ ನನಾಸಾಗಿದೆ.

click me!