ದೀರ್ಘ ಕಾಲದ ಸವಾಲು ಎದುರಿಸಲು ದೇಶದ ಸ್ಟಾರ್ಟಪ್'ಗಳು ಸಿದ್ಧ: ನಿಲೇಕಣಿ

By Internet DeskFirst Published Sep 27, 2016, 7:55 AM IST
Highlights

ಹೈದರಾಬಾದ್: ಭಾರತದಲ್ಲಿನ ಸಮಸ್ಯೆಗಳನ್ನು ಕೇಂದ್ರೀಕರಿಸಿ ಸ್ಟಾರ್ಟ್‌ಅಪ್‌ಗಳು ಮಹತ್ವದ ಘಟ್ಟ ಪ್ರವೇಶಿಸಿವೆ ಎಂದು ಇನ್ಫೋಸಿಸ್‌'ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಭಾರತದ್ದೇ ಆಗಿರುವ ನವೋದ್ಯಮ (ಸ್ಟಾರ್ಟಪ್) ಬೇಕಾಗಿದೆ ಎಂದಿದ್ದಾರೆ. ಹೈದರಾಬಾದ್‌ನಲ್ಲಿ ಸೋಮವಾರ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟಪ್ ಕ್ಷೇತ್ರದಲ್ಲಿನ ಆಳ ಮತ್ತು ಅಗಲದ ಅರಿವು ಈಗ ಉಂಟಾಗುತ್ತಿದೆ ಎಂದು ನೀಲೇಕಣಿ ಹೇಳಿದ್ದಾರೆ. ಹೊಸತಾಗಿ ಆರಂಭವಾಗಿರುವ ಕೆಲ ಕಂಪನಿಗಳು ಯಶಸ್ಸು ಕಾಣದೆ ಶೀಘ್ರವಾಗಿ ಮುಚ್ಚಿ ಹೋಗುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು ‘‘ವ್ಯಾಪಾರ-ಉದ್ದಿಮೆ ಕ್ಷೇತ್ರದಲ್ಲಿ ಇದು ಸಾಮಾನ್ಯ ಸಂಗತಿ,’’ ಎಂದು ಹೇಳಿದ್ದಾರೆ. ‘‘ಹಲವಾರು ಐಡಿಯಾಗಳಿಗೆ ಹಣಕಾಸಿನ ನೆರವು ಸಿಗುತ್ತದೆ. ಈ ಪೈಕಿ ಕೆಲವು ಯಶಸ್ವಿಯಾಗುತ್ತವೆ. ಇನ್ನುಳಿದ ಕೆಲವು ಆಗುವುದಿಲ್ಲ. ಮತ್ತೊಂದು ಹಂತದಲ್ಲಿ ಅವುಗಳು ಪುನರ್ ಚಿಂತನೆಗೆ ಒಳಪಡುತ್ತವೆ,’’ಎಂದು ಹೇಳಿದ್ದಾರೆ ನಿಲೇಕಣಿ.

ಅವುಗಳಿಂದ ಉಂಟಾಗಿರುವ ವೈಲ್ಯವನ್ನು ಹಿನ್ನಡೆ ಎಂದು ಪರಿಗಣಿಸಲಾಗದು. ಅವುಗಳನ್ನು ಮುಂದಿನ ಹಂತದ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುವಾಗ, ಹಳೆಯ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿಯೂ ಕೂಡ ಹೊಸ ಸ್ಟಾರ್ಟ್‌ಅಪ್‌ಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಡಳಿತ ಮಂಡಳಿಗಳೂ ತಮ್ಮ ವಿದ್ಯಾರ್ಥಿಗಳು ಹೊಸತನ್ನು ಸಾಸಬೇಕೆಂದು ಈ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ.

Latest Videos

(ಕೃಪೆ: ಕನ್ನಡಪ್ರಭ)

click me!